ಚೀನಾದ ದಿಢೀರ್ ಆಕ್ರಮಣಶೀಲತೆ ಕಳವಳಕಾರಿ: ಅಮೆರಿಕದ ಅಧಿಕಾರಿ

ವಾಶಿಂಗ್ಟನ್, ಅ. 7: ಚೀನಾವು ಭಾರತ ಸೇರಿದಂತೆ ತನ್ನ ನೆರೆಯ ದೇಶಗಳತ್ತ ಹಾಗೂ ಇಂಡೋ-ಪೆಸಿಫಿಕ್ ವಲಯದಲ್ಲಿ ದಿಢೀರನೆ ಅತ್ಯಂತ ಆಕ್ರಮಣಶೀಲತೆಯಿಂದ ವರ್ತಿಸುತ್ತಿದೆ ಎಂದು ಅವೆುರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆದ ಆಸ್ಟ್ರೇಲಿಯ, ಜಪಾನ್, ಭಾರತ ಮತ್ತು ಅಮೆರಿಕಗಳ ಕ್ವಾಡ್ ಸಭೆಯ ಸಮಾರೋಪದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಮಂಗಳವಾರ ನಡೆದ ಕ್ವಾಡ್ ಸಭೆಯಲ್ಲಿ ಜಪಾನ್ ವಿದೇಶ ಸಚಿವ ಟೊಶಿಮಿಟ್ಸು ಮೊಟೆಗಿ, ಭಾರತದ ವಿದೇಶ ಸಚಿವ ಎಸ್. ಜೈಶಂಕರ್, ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ಆಸ್ಟ್ರೇಲಿಯದ ವಿದೇಶ ಸಚಿವೆ ಮ್ಯಾರಿಸ್ ಪೇನ್ ಭಾಗವಹಿಸಿದ್ದರು.
ಚೀನಾದ ದಿಢೀರ್ ಆಕ್ರಮಣಶೀಲತೆ ಕಳವಳಕ್ಕೆ ಕಾರಣವಾಗಿದೆ ಎಂದು ಈ ಸಭೆಗೆ ಪಾಂಪಿಯೊ ಜೊತೆಗೆ ಟೋಕಿಯೊಗೆ ಆಗಮಿಸಿದ್ದ ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
Next Story