ಅ.10: ‘ಕಾರಂತ ಹುಟ್ಟುಹಬ್ಬ’ ಆಚರಣೆ
ಮಂಗಳೂರು, ಅ.8: ಕಡಲತೀರದ ಭಾರ್ಗವ ಎಂದೇ ಖ್ಯಾತರಾದ ಡಾ. ಕೋಟ ಶಿವರಾಮ ಕಾರಂತರ 118ನೇ ಜನ್ಮದಿನವನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರಾ ಪ್ರತಿಷ್ಠಾನದ ವತಿಯುಂದ ಅ.10ರಂದು ಬೆಳಗ್ಗೆ 10:45ಕ್ಕೆ ನಗರದ ಕೊಡಿಯಾಲ್‌ಗುತ್ತು ರಸ್ತೆ ಯಲ್ಲಿರುವ ಹೊಟೇಲ್ ಜನತಾ ಡಿಲಕ್ಸ್‌ನ ಪತ್ತುಮುಡಿ ಸೌಧದಲ್ಲಿ ಆಚರಿಸಲಾಗುವುದು.
ಈ ಸಂದರ್ಭ ಶಿವರಾಮ ಕಾರಂತರ ನಿಕಟವರ್ತಿ ಪಡಾರು ಮಹಾಬಲೇಶ್ವರ ಭಟ್‌ಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ ಪ್ರಬಂಧ ಸ್ಪರ್ಧೆ ಹಾಗೂ ಕಾರ್ಡಿನಲ್ಲಿ ಚಿತ್ರ ಸ್ಪರ್ಧಾ ಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಕಲಾಕ್ಷೇತ್ರದಲ್ಲಿ ಅನನ್ಯ ಸೇವೆಗೈದಿರುವ ಕಾಸರಗೋಡಿನ ಹೊಸದುರ್ಗದ ಜಯಾನಂದ ಕುಮಾರ್‌ಗೆ ಕಲ್ಕೂರ ಕಾರಂತ ಹುಟ್ಟುಹಬ್ಬ ಕಲಾಸೇವ ಪ್ರಶಸ್ತಿ’ ಹಾಗೂ ಕ್ರೀಡಾ ಭಾಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಅಕ್ಷತಾ ಪೂಜಾರಿ ಬೋಳ ಅವರಿಗೆ ಕಲ್ಕೂರ ಯುವ ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





