42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಎಲ್ ಜೆಪಿ; ಬಿಜೆಪಿಯಿಂದ ಬಂದವರಿಗೆ ಮಣೆ
ಬಿಹಾರ ಚುನಾವಣೆ

ಪಾಟ್ನಾ: ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನ ಶಕ್ತಿ ಪಕ್ಷ ( ಎಲ್ ಜೆಪಿ)ಮುಂಬರುವ ಬಿಹಾರ ಚುನಾವಣೆಗೆ ಗುರುವಾರ 42 ಅಭ್ಯರ್ಥಿಗಳ ಮೊದಲಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಬಿಜೆಪಿಯಿಂದ ಪಕ್ಷಾಂತರವಾಗಿರುವ ಮೂವರು ನಾಯಕರಿಗೆ ಟಿಕೆಟ್ ನೀಡಿದೆ.
ಇತ್ತೀಚೆಗೆ ಎಲ್ ಜೆಪಿಗೆ ಪಕ್ಷಾಂತರವಾಗಿದ್ದ ಬಿಜೆಪಿಯ ಮಾಜಿ ನಾಯಕರುಗಳಾದ ರಾಮೇಶ್ವರ ಚೌರಾಸಿಯ, ಉಷಾ ವಿದ್ಯಾರ್ಥಿ ಹಾಗೂ ರಾಜೇಂದ್ರ ಸಿಂಗ್ ಗೆ ಟಿಕೆಟ್ ನೀಡಲಾಗಿದೆ.
ಚೌರಾಸಿಯಾ ಅವರು ಸಸರಾಮ್ ಕ್ಷೇತ್ರದಿಂಧ ಸ್ಪರ್ಥಿಸಿದರೆ, ಉಷಾ ಹಾಗೂ ಸಿಂಗ್ ಕ್ರಮವಾಗಿ ಪಾಲಿಗಂಜ್ ಹಾಗೂ ದಿನಾರ ಕ್ಷೇತ್ರಗಳಿಂದ ಸ್ಪರ್ಥಿಸಲಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಮತ ನೀಡಬಾರದು ಎಂದು ಪಾಸ್ವಾನ್ ಕರೆ ನೀಡಿದ್ದಾರೆ.
Next Story





