ಮಂಗಳೂರು: ಟಿಆರ್‌ಎಫ್, ಅಲ್‌ಮುಝೈನ್‌ನಿಂದ ತಳ್ಳುಗಾಡಿ ಮತ್ತು ಹೊಲಿಗೆ ಯಂತ್ರ ವಿತರಣೆ

ಮಂಗಳೂರು, ಅ.8: ಜುಬೈಲ್‌ನ ಅಲ್‌ಮುಝೈನ್ ಕಾಂಟ್ರಾಕ್ಟಿಂಗ್ ಕಂಪೆನಿಯ ಸಹಯೋಗದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿ ಯಿಂದ ತಳ್ಳುಗಾಡಿ ಮತ್ತು ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವು ಟಿಆರ್‌ಎಫ್ ಸಭಾಂಗಣದಲ್ಲಿ ಗುರುವಾರ ಜರುಗಿತು.
ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌಲಾನಾ ರಿಯಾಝ್ ರಹ್ಮಾನಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ವಹಿಸಿ ಮಾತನಾಡಿದರು.
ಅಲ್ ಮುಝೈನ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆಯ ಪುತ್ರ ಝಾಹಿದ್ ಝಕರಿಯಾ ಅವರು 8 ಮಂದಿ ಅರ್ಹ ಫಲಾನುಭವಿಗಳಿಗೆ ತಲಾ 5 ಸಾವಿರ ರೂ. ಮೌಲ್ಯದ ಸಾಮಗ್ರಿಯೊಂದಿಗೆ ತಳ್ಳುಗಾಡಿಯನ್ನು ಹಸ್ತಾಂತರಿಸಿದರು. ಉದ್ಯಮಿ ಸಿ.ಆರ್. ಅಬೂಬಕರ್ ಅವರು ಐವರು ವಿಧವೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಬಜಾಲ್, ಹಿದಾಯ ಫೌಂಡೇಶನ್‌ನ ಉಪಾಧ್ಯಕ್ಷ ಆಸೀಫ್ ಡೀಲ್ಸ್, ಉದ್ಯಮಿ ಅಬ್ದುಲ್ ಹಮೀದ್ ಮಂಗಳೂರು ಭಾಗವಹಿಸಿ ಮಾತನಾಡಿದರು.
ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ಸದಸ್ಯ ನಕಾಶ್ ಬಾಂಬಿಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಟಿಆರ್‌ಎಫ್ ಸದಸ್ಯರಾದ ಬಡಿಲ ಹುಸೈನ್, ಹಕೀಂ ಬಜಾಲ್ ಸಹಕರಿಸಿದರು.






.jpeg)

.jpeg)

.jpeg)
.jpeg)



.jpeg)
.jpeg)


.jpeg)


.jpeg)

.jpeg)
.jpeg)


