ಉಡುಪಿ: ಖಾಸಗಿ ಜಾಗದ ಶುಚಿತ್ವಕ್ಕೆ ಸೂಚನೆ
ಉಡುಪಿ, ಅ.8: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿ ಜಮೀನು ಮಾಲಕರು ಪಾಳು ಬಿಟ್ಟಿರುವ ಜಮೀನಿನಲ್ಲಿ ಅವ್ಯಾಹತವಾಗಿ ಬೆಳೆದಿ ರುವ ಗಿಡ/ಗಂಟಿ ಇತರೇ ಎಲ್ಲಾ ತ್ಯಾಜ್ಯಗಳನ್ನು ಅ.30ರೊಳಗೆ ಸ್ವಚ್ಛಗೊಳಿಸಿ ಇತರರು ತ್ಯಾಜ್ಯ ಬಿಸಾಡದಂತೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ತಪ್ಪಿದ್ದಲ್ಲಿ ನಗರಸಭೆ ವತಿಯಿಂದ ಜಮೀನಿನ ವಿಸ್ತೀರ್ಣಕ್ಕೊಳಪಟ್ಟು ವಾರ್ಷಿಕವಾಗಿ 5,000 ರೂ.ನಿಂದ 50,000 ರೂ. ವರೆಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಈ ಖಾಸಗಿ ಆಸ್ತಿಗಳಿಗೆ ಹಾಗೂ ಅದರ ಮಾಲಕರಿಗೆ ನಗರಸಭೆ ಯಿಂದ ನೀಡಿರುವ ಹಾಗೂ ನೀಡಲಾಗುವ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುವುದು. ದಂಡ ಪಾವತಿಸ ದಿದ್ದಲ್ಲಿ ಕಂದಾಯ ಬಾಕಿ ಎಂದು ಹೆಚ್ಚುವರಿ ದಂಡದೊಂದಿಗೆ ವಸೂಲಿ ಮಾಡಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
Next Story





