ಆರೋಗ್ಯವಂತ ಶಿಶು ಪ್ರದರ್ಶನ
ಉಡುಪಿ, ಅ.8: ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬುಧವಾರ ಕೊಂಡಾಡಿ ವಿಶ್ವಕರ್ಮ ಸಭಾಭವನದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಡಾ. ಸ್ಯಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯ ಬಾಯಿ ಕೆ., ಚಂದ್ರಕಲಾ ಆರೋಗ್ಯ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪಾಧ್ಯಾಯ ಹರಿದಾಸ್ ಮಂಜ, ಅನಂತ್ ಅಡಿಗ ಉಪಸ್ಥಿತರಿದ್ದರು.
Next Story





