ಪುತ್ತೂರು : ನೇಣು ಬಿಗಿದುಕೊಂಡು ರಿಕ್ಷಾ ಚಾಲಕ ಆತ್ಮಹತ್ಯೆ
ಪುತ್ತೂರು : ರಿಕ್ಷಾ ಚಾಲಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಪುರುಷರಕಟ್ಟೆ ನಿವಾಸಿ ಸಂಜೀವ ಶೆಣೈ ಎಂಬವರ ಪುತ್ರ ಅವಿವಾಹಿತ 28 ವರ್ಷದ ಯುವಕ ಪ್ರವಿಣ್ ಶೆಣೈ (ಪಮ್ಮು) ಆತ್ಮಹತ್ಯೆ ಮಾಡಿಕೊಂಡವರು.
ರಿಕ್ಷಾ ಚಾಲಕರಾಗಿರುವ ಪ್ರವೀಣ್ ಶೆಣೈ ಬುಧವಾರ ರಾತ್ರಿ ಟಿವಿ ವೀಕ್ಷಿಸುತ್ತಿದ್ದು, ಮನೆಯವರು 11 ಗಂಟೆಗೆ ಮಲಗಿದ್ದರು. ರಾತ್ರಿ 2 ಗಂಟೆಗೆ ಇವರ ತಾಯಿ ಎಚ್ಚರಗೊಂಡು ನೋಡಿದಾಗ ಪ್ರವೀಣ್ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆಯ ಹಿಂಬದಿಯ ಮರವೊಂದಕ್ಕೆ ನೇಣು ಬಿಗಿದು ಕೊಂಡಿದ್ದರು ಎಂದು ತಿಳಿದು ಬಂದಿದೆ.
ಮೃತರು ತಂದೆ , ತಾಯಿ, ಓರ್ವ ಸಹೋದರ ನನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





