ಬ್ರಿಟನ್ ರಾಜಕುಮಾರನಿಂದ ಬೃಹತ್ ಮೌಲ್ಯದ ಪರಿಸರ ಪ್ರಶಸ್ತಿ ಸ್ಥಾಪನೆ

ಲಂಡನ್, ಅ. 8: ಜಗತ್ತಿನ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದ ಬೃಹತ್ ಮೌಲ್ಯದ ಪ್ರಶಸ್ತಿಯೊಂದನ್ನು ಬ್ರಿಟನ್‌ನ ರಾಜಕುಮಾರ ವಿಲಿಯಮ್ ಗುರುವಾರ ಘೋಷಿಸಿದ್ದಾರೆ.
ಮುಂದಿನ 10 ವರ್ಷಗಳ ಕಾಲ ಪ್ರತಿ ವರ್ಷ 5 ‘ಅರ್ತ್‌ಶಾಟ್ ಪ್ರಶಸ್ತಿ’ಗಳನ್ನು ನೀಡಲಾಗುತ್ತದೆ. ಪ್ರತಿ ಪ್ರಶಸ್ತಿಯು ಒಂದು ಮಿಲಿಯ ಪೌಂಡ್ (ಸುಮಾರು 9.5 ಕೋಟಿ ರೂಪಾಯಿ) ನಗದು ಬಹುಮಾನವನ್ನು ಹೊಂದಿರುತ್ತದೆ.
ಪ್ರಕೃತಿ ರಕ್ಷಣೆ, ಪರಿಶುದ್ಧ ಗಾಳಿ, ಸಾಗರಗಳನ್ನು ಪುನರುಜ್ಜೀವನಗೊಳಿಸುವುದು, ತ್ಯಾಜ್ಯ ಕಡಿತ ಮತ್ತು ಹವಾಮಾನ ಬದಲಾವಣೆ- ಈ 5 ವಿಭಾಗಗಳಲ್ಲಿ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ನವೆಂಬರ್ 1ರಿಂದ ನಾಮನಿರ್ದೇಶನಗಳನ್ನು ಮಾಡಲಾಗುತ್ತದೆ ಹಾಗೂ ಮುಂದಿನ ವರ್ಷದ ಶಿಶಿರ ಕಾಲದಲ್ಲಿ ಪ್ರಥಮ ವರ್ಷದ ಪ್ರಶಸ್ತಿ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗುತ್ತದೆ.
Next Story





