ಕೆನರಾ ಬ್ಯಾಂಕ್ ನಾಮನಿರ್ದೇಶನ ನೋಂದಣಿ ಅಭಿಯಾನ
ಬೆಂಗಳೂರು, ಅ.8: ಕೆನರಾ ಬ್ಯಾಕ್ ವತಿಯಿಂದ ಅ.5ರಿಂದ ಡಿ.15ರವರೆಗೆ ನಾಮನಿರ್ದೇಶನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹಾಗೂ ಹಿರಿಯ ನಾಗರಿಕರಿಗಾಗಿ ಇಂದೇ ನೋಂದಣಿ ಮಾಡಿ ಜೀವನ ಪರ್ಯಂತ ಆರಾಮಾಗಿರಿ ಎಂಬ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಗ್ರಾಹಕರು ಈ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದೆ.
ಗ್ರಾಹಕರು ಅವರ ಖಾತೆಯಲ್ಲಿ ನಾಮಿನೇಷನ್ ನೋಂದಣಿಯಾದ ಬಗ್ಗೆ ಖಾತರಿಪಡಿಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಖಾತೆಯಿರುವ ಶಾಖೆಗೆ ಭೇಟಿ ನೀಡಿ ಇಲ್ಲವೇ ನೆಟ್ ಬ್ಯಾಂಕಿಂಗ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





