ಎಲ್ಗರ್ ಪರಿಷತ್ ಪ್ರಕರಣ: ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನ

ಮುಂಬೈ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಆಯೋಗ (ಎನ್ ಐಎ)ಜಾರ್ಖಂಡ್ನ 83 ವರ್ಷದ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಎಲ್ಗರ್ ಪರಿಷತ್ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ 16ನೇ ವ್ಯಕ್ತಿ ಇವರಾಗಿದ್ದಾರೆ. ಹಲವು ರೀತಿಯ ಕಾಯಿಲೆಯಿಂದ ಬಳಲುತ್ತಿರುವ ಸ್ವಾಮಿ ಅವರು ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ರಾಂಚಿಯಲ್ಲಿರುವ ಸ್ವಾಮಿ ಮನೆಗೆ ಎನ್ಐಎ ತಂಡ ತಲುಪಿದೆ ಎಂದು ಹಿರಿಯ ವಕೀಲ ಮಿಹಿರ್ ದೇಸಾಯಿ ದೃಢಪಡಿಸಿದರು. ವಾರಂಟ್ ಇಲ್ಲದೆ ಸ್ವಾಮಿ ಅವರನ್ನು ಎನ್ ಐಎ ಕಚೇರಿಗೆ ಕರೆದೊಯ್ಯಲಾಗಿದೆ.
ಕೇರಳ ಮೂಲದ ಸ್ವಾಮಿ ಐದು ದಶಕಗಳ ಕಾಲ ಜಾರ್ಖಂಡ್ ನ ಬುಡಕಟ್ಟು ಪ್ರದೇಶದಲ್ಲಿ ಆದಿವಾಸಿ ಜನಾಂಗದ ಅರಣ್ಯ ಹಕ್ಕುಗಳಿಗಾಗಿ ಕೆಲಸ ಮಾಡಿದ್ದಾರೆ.
Next Story





