ಮಾನವ ಹಕ್ಕು ಹೋರಾಟಗಾರ ಸ್ಟಾನಿ ಸ್ವಾಮಿಗೆ ಅ.23ರ ತನಕ ಜೈಲು
ಹೊಸದಿಲ್ಲಿ: ಜಾರ್ಖಂಡ್ನ 83ರ ವಯಸ್ಸಿನ ಮಾನವ ಹಕ್ಕು ಹೋರಾಟಗಾರ ಫಾದರ್ ಸ್ಟಾನಿ ಸ್ವಾಮಿ ಅವರನ್ನು ಮುಂಬೈನಲ್ಲಿನ ವಿಶೇಷ ನ್ಯಾಯಾಲಯ ಅಕ್ಟೋಬರ್ 23ರ ತನಕ ಸೆರೆಮನೆಗೆ ಕಳುಹಿಸಿದೆ.
2018ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗುರುವಾರ ರಾಂಚಿಯಲ್ಲಿದ್ದ ಸ್ವಾಮಿ ಅವರನ್ನು ಅವರ ನಿವಾಸದಿಂದ ಬಂಧಿಸಿ ವಿಚಾರಣೆಗೆ ಕರೆದೊಯ್ದಿತ್ತು.
Next Story