ಟಿಆರ್‌ಪಿ ಪ್ರಕರಣ: ರಿಪಬ್ಲಿಕ್ ಟಿವಿಯ ಸಿಎಫ್‌ಒಗೆ ಮುಂಬೈ ಪೊಲೀಸರಿಂದ ಸಮನ್ಸ್

ಹೊಸದಿಲ್ಲಿ: ಈಗ ನಡೆಯುತ್ತಿರುವ ಟಿಆರ್‌ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶುಕ್ರವಾರ ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ಶಿವ ಸುಬ್ರಹ್ಮಣ್ಯಂ ಸುಂದರಂ ಅವರಿಗೆ ಸಮನ್ಸ್ ನೀಡಿದೆ.
ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಸಹಿತ ಮೂರು ಚಾನೆಲ್‌ಗಳು ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರವನ್ನು ಗುರುವಾರ ಬಯಲಿಗೆಳೆದಿದ್ದ ಮುಂಬೈ ಪೊಲೀಸರು ಈ ಕುರಿತು ತನಿಖೆ ನಡೆಸಲಾಗುವುದು ಎಂದು ಗುರುವಾರ ಹೇಳಿದ್ದರು.
ಹಂಸ ಹೆಸರಿನ ಸಂಸ್ಥೆ ಈ ಚಾನೆಲ್‌ಗಳಿಗೆ ಟಿಆರ್‌ಪಿ ಗೋಲ್ ಮಾಲ್ ಮಾಡಲು ನೆರವಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಗುರುವಾರ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಎರಡು ಮರಾಠಿ ಚಾನೆಲ್‌ಗಳ ಮಾಲಕರನ್ನು ಈಗಾಗಲೇ ಬಂಧಿಸಲಾಗಿದೆ.
Next Story





