ಯುವಕ ನಾಪತ್ತೆ

ಮಂಗಳೂರು, ಅ.9: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಸೈನ್ (22) ಎಂಬಾತ ಅ.4ರಿಂದ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.
5.4 ಅಡಿ ಎತ್ತರದ, ಎಣ್ಣೆಗಪ್ಪು ಮೈಬಣ್ಣದ, ಸಪೂರ ಶರೀರದ, ಕೋಲು ಮುಖದ ಈತ ಕನ್ನಡ, ಇಂಗ್ಲಿಷ್, ಬ್ಯಾರಿ ಭಾಷೆ ಮಾತನಾಡುತ್ತಾನೆ.
ಈತನನ್ನು ಕಂಡವರು ಮುಲ್ಕಿ ಪೊಲೀಸ್ ಠಾಣೆ (ದೂ.ಸಂ: 0824-2220533, 9480805332, 9480805359)ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





