ಗಣೇಶ ಕೊಲೆಕಾಡಿಗೆ ರಂಗ ಭಾಸ್ಕರ ಪ್ರಶಸ್ತಿ
ಮಂಗಳೂರು, ಅ.9: ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ದಿ.ಭಾಸ್ಕರ ನೆಲ್ಲಿತೀರ್ಥ ಅವರ ಸ್ಮರಣಾರ್ಥ ನೀಡುವ ರಂಗ ಭಾಸ್ಕರ ಪ್ರಶಸ್ತಿಯು ಈ ಬಾರಿ ಯಕ್ಷ-ನಾಟಕರಂಗಗಳಲ್ಲಿ ಖ್ಯಾತರಾದ ಗಣೇಶ ಕೊಲೆಕಾಡಿಗೆ ಲಭಿಸಿದೆ.
ಅ.17ರಂದು ಅವರ ಸ್ವಗೃಹದಲ್ಲಿ ಪ್ರಶಸ್ತಿಯು ಸನ್ಮಾನ ಪತ್ರ, ಪ್ರಶಸ್ತಿ ಪಲಕ ಮತ್ತು ನಗದನ್ನು ಒಳಗೊಂಡಿದೆ. ಡಾ.ಮೀನಾಕ್ಷಿ ರಾಮಚಂದ್ರ ಹಾಗೂ ಜಾದೂಗಾರ ಕುದ್ರೋಳಿ ಗಣೇಶ್ ಅವರನ್ನೊಳಗೊಂಡ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯುವ ಕೈಂಕರ್ಯ ನಿರ್ವಹಿಸಿದೆ ಎಂಬುದಾಗಿ ಸಂಚಾಲಕ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
Next Story





