ಇನ್ನು ಮುಂದೆ ಸಾರಿಗೆ ಇಲಾಖೆ ಸೇವೆ ಪಡೆಯಲು ಆನ್‍ಲೈನ್ ಅರ್ಜಿ ಕಡ್ಡಾಯ
ಬೆಂಗಳೂರು, ಅ.9: ಸಾರಿಗೆ ಇಲಾಖೆಯ ಸಕಾಲ ಸೇವೆಗಳಾದ ವಾಹನಗಳ ಮಾಲಕತ್ವ ವರ್ಗಾವಣೆ, ಸರಕು ಸಾಗಣೆ ರಹದಾರಿ ಮತ್ತು ವಾಹನ ಅರ್ಹತಾ ಪ್ರಮಾಣಪತ್ರಗಳ ಸೇವೆ ಪಡೆಯಲು ಇನ್ನು ಮುಂದೆ ಕಡ್ಡಾಯವಾಗಿ ಆನ್‍ಲೈನ್ ಅಥವಾ ಸೇವಾಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಈ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ವ್ಯಾಪಾರ ಸರಳೀಕರಣ ಮತ್ತು ವ್ಯವಹಾರ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶದಿಂದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಅಧಿಸೂಚಿತ ಸಕಾಲ ಸೇವೆಗಳನ್ನು ಆನ್ಲೈನ್ ಮೂಲಕ ನಿರ್ವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Next Story





