ಯುವತಿ ನಾಪತ್ತೆ : ದೂರು
ಪುತ್ತೂರು: ಖಾಸಗಿ ಸಂಸ್ಥೆಯೊಂದಕ್ಕೆ ಕೆಲಸಕ್ಕೆ ಹೋದ ಯುವತಿಯೊಬ್ಬರು ನಾಪತ್ತೆಯಾದ ಕುರಿತು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪುಣ್ಚಪ್ಪಾಡಿ ಗ್ರಾಮದ ನಡುಮನೆ ಚಂದ್ರಹಾಸ ರೈ ಎಂಬವರ ಪುತ್ರಿ ಮನೀಶಾ ರೈ(22) ಎಂಬವರು ನಾಪತ್ತೆಯಾದ ಯುವತಿ. ಅವರು ಅ.8ರಂದು ಪುತ್ತೂರು ಕಲ್ಲಾರೆ ಎಂಬಲ್ಲಿಗೆ ಕೆಲಸಕ್ಕೆಂದು ಹೋದವರು ಸಂಜೆ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಸ್ಥಳೀಯರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದ ಬಳಿಕ ಶುಕ್ರವಾರ ಆಕೆಯ ತಂದೆ ಚಂದ್ರಹಾಸ ರೈ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





