ರಾಜಸ್ಥಾನ್ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೆ ಏರಿದ ಡೆಲ್ಲಿ ಕ್ಯಾಪಿಟಲ್ಸ್

ಶಾರ್ಜಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 46 ರನ್ ಗಳಿಂದ ಗೆಲುವು ಸಾಧಿಸಿದ್ದು, 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.
ಗೆಲುವಿಗೆ 184 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ನಿಗದಿತ 19.4 ಓವರ್ ಗಳಲ್ಲಿ 138 ರನ್ ಗಳಿಸಿ ಆಲೌಟಾಯಿತು. ರಾಹುಲ್ ತೆವಾಟಿಯ 38, ಯಶಸ್ವೀ ಜೈಸ್ವಾಲ್ 34, ಸ್ಟೀವನ್ ಸ್ಮಿತ್ 24 ರನ್ ಗಳಿಸಿದರು.
ಡೆಲ್ಲಿ ಪರ ಕಾಗಿಸೋ ರಬಾಡ 3, ಸ್ಟೊನಿಸ್ 2, ಆರ್.ಅಶ್ವಿನ್ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಸಿಮ್ರೋನ್ ಹೆಟ್ಮೈರ್ 45, ಮಾರ್ಕಸ್ ಸ್ಟೊನಿಸ್ 39, ನಾಯಕ ಶ್ರೇಯಸ್ ಅಯ್ಯರ್ 22 ರನ್ ಗಳಿಸಿದರು.
Next Story





