ಸಾರ್ವಜನಿಕ ಜೀವನಕ್ಕೆ ಮರಳಲು ಟ್ರಂಪ್ ಸಮರ್ಥ ಶ್ವೇತಭವನದ ವೈದ್ಯರ ಹೇಳಿಕೆ
ವಾಶಿಂಗ್ಟನ್, ಅ. 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರದಿಂದ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲು ಸಮರ್ಥರಾಗುತ್ತಾರೆ ಎಂದು ಅವರ ವೈದ್ಯರು ಗುರುವಾರ ಘೋಷಿಸಿದ್ದಾರೆ.
ಕೋವಿಡ್-19ರ ಸೋಂಕಿಗೆ ಒಳಗಾದ ಬಳಿಕ, ಅಮೆರಿಕ ಅಧ್ಯಕ್ಷರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
‘‘ಟ್ರಂಪ್ ಚಿಕಿತ್ಸೆಗೆ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಅವರು ಮನೆಗೆ ಮರಳಿದಂದಿನಿಂದ ಅವರ ದೈಹಿಕ ಸ್ಥಿತಿ ಸ್ಥಿರವಾಗಿದೆ ಹಾಗೂ ಅವರ ಕಾಯಿಲೆ ಮುಂದುವರಿಯುತ್ತಿದೆ ಎನ್ನುವುದನ್ನು ಸೂಚಿಸುವ ಯಾವ ಸೂಚನೆಯೂ ಇಲ್ಲ’’ ಎಂದು ಶ್ವೇತಭವನ ನೀಡಿದ ಹೇಳಿಕೆಯೊಂದರಲ್ಲಿ ಡಾ. ಸಿಯಾನ್ ತಿಳಿಸಿದ್ದಾರೆ.
Next Story