ಮಗುವಿನೊಂದಿಗೆ ಪತ್ನಿಯನ್ನು ಹೊರಹಾಕಿದ ಪತಿ: ಆರೋಪ
ಬೆಂಗಳೂರು, ಅ.11: ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳೆಯೊಬ್ಬರನ್ನು ಎರಡು ವರ್ಷದ ಮಗುವಿನೊಂದಿಗೆ ಮನೆಯಿಂದ ಹೊರಹಾಕಿರುವ ಆರೋಪ ಇಲ್ಲಿನ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪವಿತ್ರ ಎಂಬಾಕೆ (ಹೆಸರು ಬದಲಾಯಿಸಲಾಗಿದೆ) ಕೆಲ ವರ್ಷಗಳ ಹಿಂದೆ ಹರಿಪ್ರಸಾದ್ ತೋಟಾ ಎಂಬವರ ಜೊತೆ ವಿವಾಹವಾಗಿದ್ದರು. ಅಮೆರಿಕದಲ್ಲಿ ನೆಲೆಸಿದ್ದ ಈ ದಂಪತಿ, ಇತ್ತೀಚಿಗೆ ಅಲ್ಲಿಂದ ಬೆಂಗಳೂರಿಗೆ ಬಂದು ವಾಸವಿದ್ದರು. ಆದರೆ, ಪತಿಯ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಆಕೆಯನ್ನು ಮಗುವಿನ ಜೊತೆಗೆ ಮನೆಯಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಮೂವರ ವಿರುದ್ಧ ರಾಮಮೂರ್ತಿ ನಗರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Next Story