Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ಮುಖವು ಆಗಾಗ್ಗೆ...

ನಿಮ್ಮ ಮುಖವು ಆಗಾಗ್ಗೆ ಬಾತುಕೊಳ್ಳುತ್ತದೆಯೇ? ಕಾರಣಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ11 Oct 2020 7:34 PM IST
share

ಪೋಷಕಾಂಶಗಳ ಕೊರತೆಯಿರುವ ಆಹಾರ ಸೇವನೆ ಮತ್ತು ವ್ಯಸ್ತ ಜೀವನ ಶೈಲಿಯಿಂದಾಗಿ ನಾವು ಏನಾದರೊಂದು ರೋಗಕ್ಕೆ ತುತ್ತಾಗುತ್ತಿರುತ್ತೇವೆ. ಈ ರೋಗಗಳು ಆರಂಭಿಕ ಲಕ್ಷಣಗಳನ್ನು ತೋರಿಸುತ್ತವೆ,ಆದರೆ ಈ ಗಡಿಬಿಡಿಯ ಯುಗದಲ್ಲಿ ನಮಗೆ ಯಾವುದಕ್ಕೂ ಸಮಯವೇ ಇರದ್ದರಿಂದ ಅವುಗಳನ್ನು ಗುರುತಿಸಲೂ ನಮಗೆ ಸಾಧ್ಯವಾಗುವುದಿಲ್ಲ. ಹಲವಾರು ರೋಗಗಳ ಲಕ್ಷಣಗಳು ಗೋಚರವಾಗುತ್ತವೆಯಾದರೂ ಕೆಲವು ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ರೋಗದ ತೀವ್ರತೆ ಹೆಚ್ಚುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸುತ್ತದೆ ಮತ್ತು ನಾವು ಆಸ್ಪತ್ರೆಗೆ ಸೇರಬೇಕಾಗಬಹುದು. ಕೆಲವು ಎಚ್ಚರಿಕೆಯ ಸಂಕೇತಗಳು ನಾವು ಅನಾರೋಗ್ಯಕ್ಕೆ ಗುರಿಯಾಗಿದ್ದೇವೆಯೇ ಎನ್ನುವುದನ್ನು ತಿಳಿಸಬಲ್ಲವು. ಮುಖ ಬಾತುಕೊಳ್ಳುವುದು ಇಂತಹ ಸಂಕೇತಗಳಲ್ಲೊಂದಾಗಿದೆ. ಮುಖ ಬಾತುಕೊಂಡರೆ ಅದು ಮೂರು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಅವುಗಳ ಕುರಿತು ಮಾಹಿತಿಯಿಲ್ಲಿದೆ.

ರಕ್ತಹೀನತೆ

 ಅನಿಮಿಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವವರ ಮುಖವು ಬಾತುಕೊಳ್ಳತೊಡಗುತ್ತದೆ. ಶರೀರದಲ್ಲಿ ರಕ್ತದ ಕೊರತೆಯಿಂದ ಮುಖವು ಬಾತುಕೊಳ್ಳುತ್ತಲೇ ಹೋಗುತ್ತದೆ ಮತ್ತು ವ್ಯಕ್ತಿಯು ಹಲವಾರು ತೊಂದರೆಗಳನ್ನು ಎದುರಿಸಬೇಕಾಗಬಹುದು. ಶರೀರದಲ್ಲಿ ರಕ್ತದ ಕೊರತೆಯಾದಾಗ ವ್ಯಕ್ತಿಯು ಆಯಾಸ ಮತ್ತು ನಿಶ್ಶಕ್ತಿಯನ್ನು ಅನುಭವಿಸುತ್ತಾನೆ ಮತ್ತು ಇವುಗಳು ಶರೀರದಲ್ಲಿ ಹಲವಾರು ಸಮಸ್ಯೆಗಳಿಗೆ ನಾಂದಿ ಹಾಡುತ್ತವೆ.

 ಚರ್ಮವು ಹಳದಿ ಬಣ್ಣಕ್ಕೆ ತಿರುಗುವುದು,ಮಣ್ಣು ತಿನ್ನಬೇಕೆಂಬ ಬಲವಾದ ತುಡಿತ,ಅನ್ನವನ್ನು ತಿನ್ನುವ ಬಯಕೆ,ಉಸಿರಾಟದಲ್ಲಿ ದಮ್ಮುಕಟ್ಟುವಿಕೆ, ತಲೆಸುತ್ತುವಿಕೆ,ಸದಾಕಾಲ ಬಳಲಿಕೆ ಮತ್ತು ಒತ್ತಡದಲ್ಲಿರುವುದು ಇವು ಶರೀರದಲ್ಲಿ ರಕ್ತದ ಕೊರತೆಯನ್ನು ಸೂಚಿಸುವ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

 ಶರೀರದಲ್ಲಿ ರಕ್ತದ ಕೊರತೆಯನ್ನು ತಡೆಗಟ್ಟಲು ಖರ್ಜೂರ,ಟೊಮೆಟೊ,ಸ್ಟ್ರಾಬೆರಿ ಮತ್ತು ಕಲ್ಲಂಗಡಿಯಂತಹ ಹಣ್ಣುಗಳನ್ನು ತಿನ್ನುವುದು ಅಗತ್ಯವಾಗುತ್ತದೆ. ಹಲವಾರು ದಿನಗಳಿಂದ ಮುಖ ಬಾತುಕೊಂಡಿದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

ಥೈರಾಯ್ಡ್

ಥೈರಾಯ್ಡ್  ಗ್ರಂಥಿಯು ಶರೀರದಲ್ಲಿಯ ಅಯೊಡಿನ್ ಪಡೆದುಕೊಂಡು ಥೈರಾಯ್ಡ್ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ಶರೀರದಲ್ಲಿ ಚಯಾಪಚಯವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಶರೀರದ ತೂಕವು ನಿರಂತರವಾಗಿ ಹೆಚ್ಚುತ್ತಿರುತ್ತದೆ ಮತ್ತು ಇದರಿಂದಾಗಿ ಮುಖ ಮತ್ತು ಇತರ ಅಂಗಗಳು ಊದಿಕೊಳ್ಳತೊಡಗುತ್ತವೆ. ಥೈರಾಯ್ಡ್ ಗ್ರಂಥಿಯು ಯಾವುದಾದರೂ ಕಾರಣದಿಂದ ಅತಿಯಾಗಿ ಹಾರ್ಮೋನ್‌ಗಳನ್ನು ಉತ್ಪಾದಿಸಲು ಆರಂಭಿಸಿದಾಗ ಅದು ಬೆಳೆಯತೊಡಗುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮುಖ ಮತ್ತು ಶರೀರದ ಇತರ ಅಂಗಗಳು ಊದಿಕೊಳ್ಳುತ್ತಿದ್ದಾಗ ವ್ಯಕ್ತಿಯು ಕಿರಿಕಿರಿಯನ್ನು ಅನುಭವಿಸುತ್ತಾನೆ, ಇಷ್ಟು ಮಾತ್ರವಲ್ಲ, ಆರೋಗ್ಯವೂ ಹದಗಡುತ್ತದೆ. ಹೀಗಾಗಿ ಮುಖದಲ್ಲಿ ಬಾತು ಕಾಣಿಸಿಕೊಂಡರೆ ಅದು ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದಾದ್ದರಿಂದ ಅದನ್ನು ಖಂಡಿತ ಕಡಗಣಿಸಬಾರದು.

ವಿವರಿಸಲಾಗದ ತೂಕ ಏರಿಕೆ, ಚಡಪಡಿಕೆ, ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಿರುವುದು ಅಥವಾ ನಿದ್ರಾಹೀನತೆ, ಅಕಾಲದಲ್ಲಿ ಅಥವಾ ವಿಳಂಬವಾಗಿ ಅಥವಾ ಹಲವಾರು ಸಲ ಋತುಸ್ರಾವ,ಹೆಚ್ಚಿನ ಹೃದಯಬಡಿತ ಇವು ಥೈರಾಯ್ಡ್ ನ ಲಕ್ಷಣಗಳಾಗಿವೆ.

ವಸಡಿನ ತೊಂದರೆ

ವ್ಯಕ್ತಿಯು ತನ್ನ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಅದರ ಪರಿಣಾಮ ಮುಖದ ಮೇಲೂ ಕಾಣಿಸಿಕೊಳ್ಳುತ್ತದೆ. ನಮ್ಮ ಹಲ್ಲುಗಳು ಸಹ ಮುಖ ಬಾತುಕೊಳ್ಳುವ ಸಮಸ್ಯೆಗಳನ್ನುಂಟು ಮಾಡಬಲ್ಲವು. ವ್ಯಕ್ತಿಗೆ ಜಿಂಗೈವೈಟಿಸ್ ಅಥವಾ ಪರಿದಂತ ನೋವಿದ್ದರೆ ಅದು ಮುಖ ಬಾತುಕೊಳ್ಳುವುದಕ್ಕೆ ಕಾರಣವಾಗಬಹುದು. ವಸಡುಗಳಲ್ಲಿ ನೋವಿದ್ದಾಗ ವ್ಯಕ್ತಿಗೆ ಸರಿಯಾಗಿ ಊಟ ಮಾಡಲೂ ಸಾಧ್ಯವಾಗುವುದಿಲ್ಲ ಮತ್ತು ಒಟ್ಟಾರೆ ಆರೋಗ್ಯವೂ ಹದಗೆಡುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಕಡೆಗಣಿಸಬಾರದು. ವಸಡು ಸಮಸ್ಯೆಗಳು ನಮ್ಮ ದೀರ್ಘ ಸಮಯ ಬಾಯಿ ಅನಾರೋಗ್ಯವನ್ನುಂಟು ಮಾಡುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X