Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಜ್ಞಾಪಕ ಶಕ್ತಿ ನಷ್ಟವನ್ನುಂಟು ಮಾಡುವ ಈ...

ಜ್ಞಾಪಕ ಶಕ್ತಿ ನಷ್ಟವನ್ನುಂಟು ಮಾಡುವ ಈ ವಿರಳ ಕಾರಣಗಳು ನಿಮಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ11 Oct 2020 7:41 PM IST
share
ಜ್ಞಾಪಕ ಶಕ್ತಿ ನಷ್ಟವನ್ನುಂಟು ಮಾಡುವ ಈ ವಿರಳ ಕಾರಣಗಳು ನಿಮಗೆ ಗೊತ್ತೇ?

ವಸ್ತುಗಳನ್ನು ಎಲ್ಲಿಟ್ಟಿದ್ದೀರೆಂದು ನೆನಪಾಗದೆ ಪರದಾಡುವವರ ಪೈಕಿ ನೀವೂ ಸೇರಿದ್ದೀರಾ? ಅಪರೂಪಕ್ಕೊಮ್ಮೆ ಹೀಗಾಗುತ್ತಿದ್ದರೆ ಅದೇನೂ ತೊಂದರೆಯಲ್ಲ. ಆದರೆ ಹೀಗೆ ನೆನಪಾಗದ ಸಂದರ್ಭಗಳು ಆಗಾಗ್ಗೆ ಮರುಕಳಿಸುತ್ತಿದ್ದರೆ ಅದು ಭವಿಷ್ಯದಲ್ಲಿ ಜ್ಞಾಪಕ ಶಕ್ತಿ ನಷ್ಟಕ್ಕೆ ಕಾರಣವಾಗಬಹುದು. ವಯಸ್ಸಾಗುತ್ತಿದ್ದಂತೆ ಜ್ಞಾಪಕ ಶಕ್ತಿಯೂ ಕುಂಠಿತಗೊಳ್ಳುತ್ತದೆ,ಆದರೆ ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರು 70-80ರ ವಯಸ್ಸಿನಲ್ಲಿಯೂ ಪ್ರಬಲ ಜ್ಞಾಪಕ ಶಕ್ತಿಯನ್ನು ಹೊಂದಿರುತ್ತಾರೆ,ಇನ್ನು ಕೆಲವರಿಗೆ 20-30 ವರ್ಷ ಪ್ರಾಯದಲ್ಲಿಯೇ ಜ್ಞಾಪಕ ಶಕ್ತಿ ಕಡಿಮೆಯಾಗಿರುತ್ತದೆ. ಜ್ಞಾಪಕ ಶಕ್ತಿ ಕಡಿಮೆಯಾಗಲು ವಿವಿಧ ಕಾರಣಗಳಿವೆ. ವಯಸ್ಸಾಗುವಿಕೆ,ಕಳಪೆ ಆಹಾರ, ತಲೆಗೆ ಪೆಟ್ಟು ಇತ್ಯಾದಿಗಳು ಹೆಚ್ಚು ಸಾಮಾನ್ಯ ಕಾರಣಗಳಾಗಿವೆ. ಆದರೆ ಕೆಲವು ವಿರಳ ಕಾರಣಗಳೂ ನಿಮ್ಮ ಜ್ಞಾಪಕ ಶಕ್ತಿಯನ್ನು ಕುಂದಿಸುತ್ತವೆ. ಅಂತಹ ಕೆಲವು ಕಾರಣಗಳಿಲ್ಲಿವೆ.....

ನಿದ್ರೆಯ ಕೊರತೆ

ನೀವು ಎಷ್ಟು ಗಂಟೆ ನಿದ್ರೆ ಮಾಡುತ್ತೀರಿ ಎನ್ನುವುದು ಮತ್ತು ಅದರ ಗುಣಮಟ್ಟ ಜ್ಞಾಪಕ ಶಕ್ತಿ ಸೇರಿದಂತೆ ಅರಿವಿನ ಆರೋಗ್ಯದಲ್ಲಿ ಅತ್ಯಂತ ಮುಖ್ಯವಾಗಿವೆ. ಕಡಿಮೆ ಅವಧಿಯ ನಿದ್ರೆ ಅಥವಾ ರಾತ್ರಿ ನಿದ್ರೆಯಿಂದ ಆಗಾಗ್ಗೆ ಏಳುವುದು ಇವೆಲ್ಲ ಬಳಲಿಕೆಗೆ ಕಾರಣವಾಗುತ್ತವೆ ಮತ್ತು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಅಲ್ಲದೆ ನೀವು ಯಾವ ಮಗ್ಗುಲಲ್ಲಿ ಮಲಗುತ್ತೀರಿ ಎನ್ನುವುದೂ ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ದಿನಕ್ಕೆ ಕನಿಷ್ಠ 6ರಿಂದ 8 ಗಂಟೆಗಳ ನಿದ್ರೆಯನ್ನು ತಪ್ಪಿಸಬೇಡಿ.

ಪೋಷಕಾಂಶಗಳ ಕೊರತೆ

ಎಲ್ಲ ಅಗತ್ಯ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಒಳಗೊಂಡಿರುವ ಪೌಷ್ಟಿಕ ಆಹಾರವು ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಪ್ರಮುಖ ಪೋಷಕಾಂಶಗಳಲ್ಲಿ ಕೊರತೆಯಾದರೆ ಅದು ಜ್ಞಾಪಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಪ್ರೋಟಿನ್,ಕೊಬ್ಬು,ಕಾರ್ಬೊಹೈಡ್ರೇಟ್‌ಗಳು,ವಿಟಾಮಿನ್‌ಗಳು ಮತ್ತು ಖನಿಜಗಳು ಇವೆಲ್ಲ ಮಿದುಳಿನ ಸುಗಮ ಕಾರ್ಯಾಚರಣೆಗೆ ಅಗತ್ಯವಾಗಿವೆ. ವಿಶೇಷವಾಗಿ ವಿಟಾಮಿನ್ ಬಿ1 ಮತ್ತು ಬಿ 12 ಕೊರತೆಯು ಜ್ಞಾಪಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯ ಸೇವನೆ

 ಅತಿಯಾದ ಮದ್ಯಪಾನವು ಜ್ಞಾಪಕ ಶಕ್ತಿ ನಷ್ಟಕ್ಕೆ ಕಾರಣವಾಗಿ ಗುರುತಿಸಲ್ಪಟ್ಟಿದೆ. ಇದೇ ವೇಳೆ ಧೂಮ್ರಪಾನವು ಮಿದುಳನ್ನು ತಲುಪುವ ಆಮ್ಲಜನಕದ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ನೆನಪಿನ ಶಕ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಆಮ್ಲಜನಕದ ಕೊರತೆಯು ಹಲವಾರು ಅನಾರೋಗ್ಯಗಳಿಗೆ ತುತ್ತಾಗುವ ಅಪಾಯವನ್ನುಂಟು ಮಾಡುತ್ತದೆ. ಇತರರಿಗೆ ಹೋಲಿಸಿದರೆ ಧೂಮ್ರಪಾನ ಮಾಡುವ ವ್ಯಕ್ತಿಗಳು ಹೆಚ್ಚು ಜ್ಞಾಪಕ ಶಕ್ತಿಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಾದಕ ದ್ರವ್ಯಗಳ ಸೇವನೆಯೂ ಮಿದುಳಿನಲ್ಲಿ ರಾಸಾಯನಿಕ ಬದಲಾವಣೆಯನ್ನುಂಟು ಮಾಡುತ್ತದೆ ತನ್ಮೂಲಕ ಜ್ಞಾಪಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಒತ್ತಡ, ಆತಂಕ ಮತ್ತು ಖಿನ್ನತೆ

ಖಿನ್ನತೆಯು ಏಕಾಗ್ರತೆಯನ್ನು ಕಠಿಣಗೊಳಿಸುತ್ತದೆ ಮತ್ತು ಇದು ನೇರವಾಗಿ ನೆನಪಿನ ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಏಕಾಗ್ರತೆ ಸಾಧ್ಯವಾಗದಿರುವುದರಿಂದ ಹತಾಶೆ ಮತ್ತು ಆತಂಕಗಳೂ ಉಂಟಾಗುತ್ತವೆ. ನೀವು ಒತ್ತಡದಲ್ಲಿದ್ದಾಗ ಮತ್ತು ಮನಸ್ಸು ಗೊಂದಲದಲ್ಲಿದ್ದಾಗ ನೆನಪಿನ ಶಕ್ತಿಯು ಕಡಿಮೆಯಾಗುತ್ತದೆ. ಭಾವನಾತ್ಮಕ ಆಘಾತದಿಂದಲೂ ನೆನಪಿನ ಶಕ್ತಿ ದುರ್ಬಲಗೊಳ್ಳಬಹುದು. ಹೀಗಾಗಿ ಅನಗತ್ಯ ಒತ್ತಡ,ಆತಂಕ ಮತ್ತು ಖಿನ್ನತೆಯನ್ನು ತಡೆಯುವುದು ಅಗತ್ಯವಾಗಿದೆ.

ಔಷಧಿಗಳು: ನಾವು ಸೇವಿಸುವ ಹಲವಾರು ಔಷಧಿಗಳು ನೆನಪಿನ ಶಕ್ತಿಯನ್ನು ಕಡಿಮೆ ಮಾಡಬಲ್ಲವು. ಖಿನ್ನತೆ ನಿರೋಧಕಗಳು,ಅಲರ್ಜಿಯನ್ನು ಹೋಗಲಾಡಿಸಲು ಬಳಸುವ ಆ್ಯಂಟಿಹಿಸ್ಟಮೈನ್‌ಗಳು,ಒತ್ತಡವನ್ನು ತಗ್ಗಿಸುವ ಔಷಧಿಗಳು,ಸ್ನಾಯುಗಳನ್ನು ಸಡಿಲಿಸುವ ಔಷಧಿಗಳು, ನಿದ್ರೆಮಾತ್ರೆಗಳು,ಶಸ್ತ್ರಚಿಕಿತ್ಸೆ ಬಳಿಕ ಸೇವಿಸುವ ನೋವು ನಿವಾರಕಗಳು ಜ್ಞಾಪಕ ಶಕ್ತಿ ನಷ್ಟದಲ್ಲಿ ಪ್ರಮುಖ ಪಾತ್ರ ಹೊಂದಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X