ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾಗಿ ರೋಬರ್ಟ್ ಮಿನೇಜಸ್

ರೋಬರ್ಟ್
ಉಡುಪಿ, ಅ.11: ಉಡುಪಿ ಧರ್ಮಪ್ರಾಂತ್ಯದ ಪ್ರಭಾವಿ ಸಂಘಟನೆಯಾದ ಕೆಥೊಲಿಕ್ ಸಭಾ ಇದರ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಕಳ ವಲಯದ ಕಣಜಾರು ಧರ್ಮಕೇಂದ್ರದ ರೊಬರ್ಟ್ ಮಿನೇಜಸ್ ಆಯ್ಕೆ ಯಾಗಿದ್ದಾರೆ.
ಉಡುಪಿಯ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ರವಿವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾ ಯಿತು. ಇದೇ ವೇಳೆ ಇತರ ಪದಾಧಿಕಾರಿಗಳು ಕೂಡ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್ ಕೋಟ, ನಿಯೋಜಿತ ಅಧ್ಯಕ್ಷರಾಗಿ ಮೇರಿ ಡಿಸೋಜ ಉದ್ಯಾವರ, ಉಪಾಧ್ಯಕ್ಷರಾಗಿ ರೊನಾಲ್ಡ್ ಆಲ್ಮೇಡಾ ಉದ್ಯಾವರ, ಕಾರ್ಯದರ್ಶಿಯಾಗಿ ಸಂತೋಷ್ ಕರ್ನೆಲಿಯೋ ಕಲ್ಯಾಣಪುರ, ಸಹ ಕಾರ್ಯದರ್ಶಿಯಾಗಿ ಗ್ರೆಗರಿ ಪಿಕೆ ಡಿಸೋಜ ಶಂಕರಪುರ, ಕೋಶಾಧಿಕಾರಿ ಯಾಗಿ ಜೆರಾಲ್ಡ್ ರೊಡ್ರಿಗಸ್ ಶಿರ್ವ, ಸಹಾಯಕ ಕೋಶಾಧಿಕಾರಿಯಾಗಿ ಹೆರಿಕ್ ಗೊನ್ಸಾಲ್ವಿಸ್ ಗಂಗೊಳ್ಳಿ, ಆಂತರಿಕ ಲೆಕ್ಕಪರಿಶೋಧಕರಾಗಿ ಎಡ್ವರ್ಡ್ ಲಾರ್ಸನ್ ಡಿಸೋಜ ಪೇತ್ರಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮತ್ತು ವಾಲ್ಟರ್ ಸಿರಿಲ್ ಪಿಂಟೊ ನಡೆಸಿಕೊಟ್ಟರು.





