ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿಗೆ ಕಸಾಪದಿಂದ ಸನ್ಮಾನ

ಉಡುಪಿ, ಅ.11: ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಸಮಿತಿಯ ಸದಸ್ಯೆ, ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿ ಅವರನ್ನು ರವಿವಾರ ಕರಂದಾಡಿಯ ಅವರ ನಿವಾಸದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಹಿರಿಯ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯರವರು ಪ್ರಜ್ಞಾ ಅವರನ್ನು ಗೌರವಿಸಿದರು. ಈ ಸಂದರ್ದಲ್ಲಿ ಪ್ರಜ್ಞಾರವರ ಮಾತೃಶ್ರೀ ರಾಜೇಶ್ವರೀ ಗುರುರಾಜ್ ಮಾರ್ಪಳ್ಳಿ, ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾಧರ್ ಪುರಾಣಿಕ್, ವಿದ್ಯಾ ಅಮ್ಮಣ್ಣಾಯ, ಸದಸ್ಯರಾದ ನೀಲಾನಂದ ನಾಯ್ಕ್, ಸುದಕ್ಷಿಣೆ ಉಪಸ್ಥಿತರಿದ್ದರು.
Next Story





