ಶ್ರೀಕೃಷ್ಣ ಮಠದ ಸ್ಥಳೀಯ ಭಕ್ತರಿಗೆ ಸುದರ್ಶನ ಪಾಸ್ ವಿತರಣೆ

ಉಡುಪಿ, ಅ.11: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸ್ಥಳೀಯ ಭಕ್ತರಿಗೆ ಸುಲಲಿತ ವಾಗಿ ಶ್ರೀಕೃಷ್ಣ ದರ್ಶನ ಮಾಡಲು ಪರ್ಯಾಯ ಅದಮಾರು ಮಠದಿಂದ ವ್ಯವಸ್ಥೆ ಮಾಡಿರುವ ಸುದರ್ಶನ ಹೆಸರಿನ ಪಾಸನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ರವಿವಾರ ಸಾಂಕೇತಿಕವಾಗಿ ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಕ್ತರ ಸಂಖ್ಯೆ ಅಧಿಕವಿದ್ದು ಜನ ಸಂದಣಿ ಇರುವಾಗ, ಸ್ಥಳೀಯ ಭಕ್ತರಿಗೆ ಮಠದ ಸಂಪ್ರದಾಯಗಳು ಗೊತ್ತಿರು ವುದರಿಂದ ಸುಲಭದಲ್ಲಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ, ಈ ಪಾಸ್‌ನಲ್ಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಗಳಿರುವುದರಿಂದ ವಿಶೇಷ ಸಂದರ್ಭದಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗುವುದರಿಂದ ಹಾಗೂ ಮಠದ ರಕ್ಷಣೆಯ ಸಲುವಾಗಿ ಈ ಪಾಸನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಕೃಷ್ಣ ಭಕ್ತರಿಗೆ ಅುಕೂಲವಾಗಲಿದೆ ಎಂದರು.
ಪ್ರಸ್ತುತ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದು ಈ ಅವಧಿಯಲ್ಲಿ ಪರ್ಯಾಯ ಮಠದ ಸೂಚನೆ ಹಾಗು ನಿರ್ಣಯದಂತೆ ಮಠದ ದಕ್ಷಿಣದಲ್ಲಿರುವ ಮಹಾದ್ವಾರದ ಸಮೀಪ ಹಾಗೂ ಉತ್ತರ ದ್ವಾರದ ಮೂಲಕ ಪಾಸ್ ಇದ್ದ ಭಕ್ತರು ಪ್ರವೇಶ ಮಾಡಬಹುದು ಎಂದು ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.





