ಮಾಸ್ಕ್ ನಿಯಮ ಉಲ್ಲಂಘಣೆ : 20,600ರೂ. ದಂಡ ವಸೂಲಿ
ಉಡುಪಿ, ಅ.11: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅ.10ರಂದು ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ 206 ಮಂದಿಯಿಂದ ಒಟ್ಟು 20,600ರೂ. ದಂಡ ವಸೂಲಿ ಮಾಡಲಾಗಿದೆ.
ನಗರಸಭಾ ವ್ಯಾಪ್ತಿಯಲ್ಲಿ 500ರೂ., ಪಂಚಾಯತ್ ವ್ಯಾಪ್ತಿಯಲ್ಲಿ 200 ರೂ., ಪೊಲೀಸ್ ಇಲಾಖೆಯು 19,600ರೂ., ಅಬಕಾರಿ ಇಲಾಖೆಯು 300ರೂ. ದಂಡ ವಸೂಲಿ ಮಾಡಿದೆ. ಹೀಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 9654 ಮಂದಿಯಿಂದ 11,02,350ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





