ಆದ್ಯಪಾಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ

ಮಂಗಳೂರು, ಅ.11: ಬಜ್ಪೆ ಸಮೀಪದ ಆದ್ಯಪಾಡಿ ಗ್ರಾಮದ ಸೈಟ್ ಮುಖ್ಯ ರಸ್ತೆಯಿಂದ 2 ಅಡ್ಡರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ 5 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ರವಿವಾರ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ತಾಪಂ ಸದಸ್ಯ ಶಿವಪ್ಪಬಂಗೇರ, ಸ್ಥಳೀಯರಾದ ಶೋಧನ್ ಆದ್ಯಪಾಡಿ, ಭುಜಂಗ ಕುಲಾಲ್, ಯಾದವ್ ಕುಲಾಲ್, ಜಯರಾಮ ಪೂಜಾರಿ, ವಿನೋದ್ ರಾಜ್, ನಾಗೇಶ್ ಕುಲಾಲ್, ಸವಿತಾ ಶೆಟ್ಟಿ, ಈಶ್ವರ ಅದ್ಯಪಾಡಿ ಉಪಸ್ಥಿತರಿದ್ದರು.
Next Story





