ಮಂಗಳೂರು: ಟಿಕ್ ಟಾಕ್ ಆ್ಯಪ್, ಮ್ಯೂಸಿಕ್ ಆಲ್ಬಮ್ ಬಿಡುಗಡೆ

ಮಂಗಳೂರು, ಅ.11: ಮುಂಬೈ ಮೂಲದ ಐರಿಸ್ ಗ್ಲೋಬಲ್ ಮೀಡಿಯಾ ಸಂಸ್ಥೆಯ ದೇಶೀ ನಿರ್ಮಿತ ‘ಟಿಕ್ ಟಾಕ್’ ಆ್ಯಪ್ ಮತ್ತು ‘ಇಶ್ಕ್ ಕಾ ಸೌದಾ’ನ ಮ್ಯೂಸಿಕ್ ಆಲ್ಬಮ್‌ನ ಬಿಡುಗಡೆ ಕಾರ್ಯಕ್ರಮವು ರವಿವಾರ ನಗರ ಹೊರವಲಯದ ಎಯ್ಯಾಡಿಯ ಬುದ್ಧ ಕೆಫೆಯಲ್ಲಿ ನಡೆಯಿತು.
ಟಿಕ್ ಟಾಕ್ ಆ್ಯಪ್ ಬ್ರಾಂಡ್ ಅಂಬಾಸಿಡರ್, ಇಶ್ಕ್ ದ ಸೌದ ಸಾಂಗ್ ಸಿಂಗರ್ ನಟಿ, ಭಾವನ ಗುಪ್ತಾ, ಪ್ರೊಡ್ಯೂಸರ್ ಕಿರಣ್ ಬಿಎನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯು ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟಿಕ್ ಟಾಕ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಕರಾವಳಿ ಪ್ರದೇಶಗಳ ಸೌಂದರ್ಯವನ್ನು ಬಾಲಿವುಡ್‌ನಲ್ಲೂ ಮೆರುಗಿಸುವ ಉದ್ದೇಶದಿಂದ ಈ ಸಾಂಗ್‌ನ ಸಂಪೂರ್ಣ ಚಿತ್ರೀಕರಣ ಕರಾವಳಿ ಭಾಗದಲ್ಲಿ ಮಾಡಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಐರಿಸ್ ಮೀಡಿಯ ಈ ಭಾಗದ ಎಲ್ಲಾ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದು ತಿಳಿಸಿದರು.

Next Story





