ಈಜಲು ತೆರಳಿದ್ದ ಬಿಎಸ್‍ಪಿ ಮುಖಂಡ ನೀರುಪಾಲು

ಮೈಸೂರು,ಅ.11: ಈಜಲು ಹೋಗಿದ್ದ ನಂಜನಗೂಡು ತಾಲೂಕು ಬಿಎಸ್‍ಪಿ ಅಧ್ಯಕ್ಷ ನೀರಿನಲ್ಲಿ ಮುಳುಗಿ ಕೊಚ್ಚಿಹೋಗಿದ್ದಾರೆ.
ನಂಜನಗೂಡು ತಾಲೂಕು ಸಿಂಗಾರಿಪುರ ಗ್ರಾಮದವರಾದ ರಾಮಚಂದ್ರು (46) ರವಿವಾರ ಬೆಳಗ್ಗೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದಾರೆ. ನಂತರ ವಾಪಸ್ ಬರುವಾಗ ಸೆಕೆ ಎಂದುಕೊಂಡು ಅವರ ಗ್ರಾಮದ ಬಳಿ ಹಾದು ಹೋಗುವ ತಗಡೂರು ರಾಮಚಂದ್ರರಾವ್ ಕಾಲುವೆಯಲ್ಲಿ ಈಜಲು ಹೋಗಿದ್ದಾರೆ. ಆದರೆ ನೀರಿನಿಂದ ಮತ್ತೆ ಮೇಲೇಳಲೇ ಇಲ್ಲ ಎಂದು ಹೇಳಲಾಗಿದೆ.
ರಾಮಚಂದ್ರು ಅವರು ನೀರಿನಲ್ಲಿ ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ಮತ್ತು ಅಕ್ಕಪಕ್ಕದ ಗ್ರಾಮದವರು ಆಗಮಿಸಿ ಶೋಧ ಕಾರ್ಯ ನಡೆಸಿದರು. ಆದರೆ ಸಂಜೆವರೆಗೂ ದೇಹ ಮಾತ್ರ ಪತ್ತೆಯಾಗಿರಲಿಲ್ಲ.
ರಾಮಚಂದ್ರು ನೀರಿನಲ್ಲಿ ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಬಿಎಸ್‍ಪಿ ಮುಖಂಡರು ಮತ್ತು ಅಭಿಮಾನಿಗಳು ಆಗಮಿಸಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ರಾಮಚಂದ್ರು ಅವರಿಗಾಗಿ ಇನ್ನೂ ಶೋಧ ನಡೆಸಲಾಗುತ್ತಿದೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





