ನ.4ರಿಂದ ಮಹಿಳಾ ಟ್ವೆಂಟಿ-20 ಚಾಲೆಂಜ್
3 ತಂಡಗಳಿಗೆ ಭಾರತದ ಕೌರ್, ಸ್ಮೃತಿ, ಮಿಥಾಲಿ ನೇತೃತ್ವ
ಹೊಸದಿಲ್ಲಿ, ಅ.11ಯುಎಇಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಹಿಳಾ ಟ್ವೆಂಟಿ-20 ಚಾಲೆಂಜ್‌ನ 2020ರ ಆವೃತ್ತಿಗೆ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧಾನಾ ಮತ್ತು ಮಿಥಾಲಿ ರಾಜ್ ಅವರನ್ನು ಕ್ರಮವಾಗಿ ಸೂಪರ್‌ನೋವಾಸ್, ಟ್ರೈಲ್‌ಬ್ಲೇಝರ್ಸ್ ಮತ್ತು ವೆಲೋಸಿಟಿ ತಂಡಗಳ ನಾಯಕಿಯರನ್ನಾಗಿ ಆಯ್ಕೆ ಮಾಡಲಾಗಿದೆ. ನವೆಂಬರ್ 4, 5 ಮತ್ತು 7 ರಂದು ನಡೆಯಲಿರುವ ಮೂರು ರೌಂಡ್-ರಾಬಿನ್ ಪಂದ್ಯಗಳಿಗೆ ಬಿಸಿಸಿಐ ರವಿವಾರ ವೇಳಾಪಟ್ಟಿ ಮತ್ತು ತಂಡಗಳನ್ನು ಪ್ರಕಟಿಸಿದೆ. ಫೈನಲ್ ಪಂದ್ಯವು ನವೆಂಬರ್ 9 ರಂದು ನಡೆಯಲಿದೆ.
ಸ್ಥಳಗಳನ್ನು ಬಿಸಿಸಿಐ ಇನ್ನೂ ಘೋಷಿಸಿಲ್ಲ ಎಲ್ಲಾ ಪಂದ್ಯಗಳು ಐಪಿಎಲ್‌ನಂತೆ ರಾತ್ರಿ 7:30ಕ್ಕೆ ಪ್ರಾರಂಭವಾಗಲಿವೆ. ಹಾಲಿ ಚಾಂಪಿ ಯನ್ ಸೂಪರ್‌ನೋವಾಸ್ ನವೆಂಬರ್4 ರಂದು ನಡೆಯುವ ಮೊದಲ ಪಂದ್ಯದಲ್ಲಿ ವೆಲೋಸಿಟಿಯನ್ನು ಎದುರಿಸಲಿದೆ.
ಅಖಿಲ ಭಾರತ ಮಹಿಳಾ ಕ್ರಿಕೆಟ್‌ಆಯ್ಕೆ ಸಮಿತಿಯು ತಲಾ 15 ಸದಸ್ಯರನ್ನು ಒಳಗೊಂಡ 3 ತಂಡಗಳನ್ನು ಹೆಸರಿಸಿದ್ದು, ಪ್ರತಿ ತಂಡದಲ್ಲಿ ನಾಲ್ಕು ವಿದೇಶಿ ಆಟಗಾರರು ಇದ್ದಾರೆ. ಚಮರಿ ಅಥಾಪಟ್ಟು, ಶಶಿಕಲಾ ಸಿರಿವರ್ಧನೆ, ಶಾಕೀರಾ ಸೆಲ್ಮಾನ್ ಮತ್ತು ಅಯಬೊಂಗಾ ಖಾಕಾ ಅವರು ಸೂಪರ್ ನೋವಾಸ್ ತಂಡದಲ್ಲಿ, ಟ್ರೈಲ್‌ಬ್ಲೇಝರ್ಸ್ ತಂಡದಲ್ಲಿ ದಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್ ಮತ್ತು ಸಲ್ಮಾ ಖಾತೂನ್ ಸ್ಥಾನ ಪಡೆದಿದ್ದಾರೆ ಮತ್ತು ಥಾಯ್‌ಲ್ಯಾಂಡ್‌ನ ಆಟಗಾರ್ತಿ ನಥಕನ್ ಚಾಂಥಮ್ ಕೂಡ ಸೇರಿದ್ದಾರೆ. ಡೇನಿಯಲ್ ವೇಟ್, ಲೇಘ್ ಕಾಸ್ಪೆರೆಕ್, ಸುನೆ ಲೂಸ್ ಮತ್ತು ಜಹನಾರಾ ಆಲಮ್ ವೆಲೋಸಿಟಿ ತಂಡದ ಭಾಗವಾಗಿದ್ದಾರೆ.
►ಸೂಪರ್‌ನೋವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್ (ಉಪನಾಯಕಿ), ಚಮರಿ ಅಥಾಪಟ್ಟು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಶಿಕಲಾ ಸಿರಿ ವರ್ಧನೆ, ಪೂನಮ್ ಯಾದವ್, ಶಾಕೀರಾ ಸೆಲ್ಮಾನ್ ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕಾರ್, ಅಯಬೊಂಗಾ ಖಾಕಾ, ಮುಸ್ಕನ್ ಮಲಿಕ್.
►ಟ್ರೈಲ್‌ಬ್ಲೇಝರ್ಸ್: ಸ್ಮತಿ ಮಂಧಾನಾ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪೂನಮ್ ರೌತ್, ರಿಚಾ ಘೋಷ್, ಡಿ. ಹೇಮಲತಾ, ನುಸ್ರತ್ ಪರ್ವೀನ್ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮ್ರಾನ್ ದಿಲ್ ಬಹಾದೂರ್, ಸಲ್ಮಾ ಖಾತೂನ್, ಸೋಫಿ ಎಕ್ಲೆಸ್ಟೋನ್, ನಥಕನ್ ಚಾಂಥಮ್, ದಿಯಾಂಡ್ರಾ ಡೊಟಿನ್, ಕಾಶ್ವೀ ಗೌತಮ್.
►ವೆಲೋಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ (ಉಪನಾಯಕಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ (ಉಪನಾಯಕಿ), ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿವ್ಯದರ್ಶಿನಿ, ಮನಾಲಿ ದಾಕ್ಷೀಣಿ, ಲೇಘ್ ಕಾಸ್ಪೆರೆಕ್, ಡೇನಿಯಲ್ ವೇಟ್, ಸುನೆ ಲೂಸ್, ಜಹನಾರಾ ಆಲಮ್ ಮತ್ತು ಎಂ.ಅನಘಾ.







