ಅಶ್ಲೀಲ ಫೋಟೋ ಇಟ್ಟುಕೊಂಡು ಹಣ ನೀಡುವಂತೆ ಬೆದರಿಕೆ: ಓರ್ವ ಸೆರೆ

ಬೆಂಗಳೂರು, ಅ.11: ವ್ಯಕ್ತಿಯೊಬ್ಬರ ಅಶ್ಲೀಲ ಫೋಟೋ ಇಟ್ಟುಕೊಂಡು ಹಣ ನೀಡುವಂತೆ ಬೆದರಿಸಿ ಹಾಕಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ವೈಟ್ ಫೀಲ್ಡ್ ವಿಭಾಗದ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಚಿಕ್ಕಜಾಲ ನಿವಾಸಿ ವಿಶ್ವನಾಥ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ಸಾಂ ಮೂಲದ ಆರೋಪಿ ವಿಶ್ವನಾಥ್ ಕೋಳಿ ಫಾರಂ ನಡೆಸುತ್ತಿದ್ದು, ವಾಟ್ಸ್ ಆ್ಯಪ್ ಗ್ರೂಪ್‍ನಲ್ಲಿ ಪ್ರಾಧ್ಯಾಪಕರೊಬ್ಬರ ಫೋಟೋ ತೆಗೆದುಕೊಂಡು ಅದನ್ನು ಅಶ್ಲೀಲವಾದ ರೀತಿಯಲ್ಲಿ ಬದಲಾವಣೆ ಮಾಡಿ, ಹಣ ನೀಡುವಂತೆ ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ದಾಖಲಾದ ದೂರಿನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ.
Next Story