ಪ್ರಮಾಣ ಪತ್ರ ಸಲ್ಲಿಕೆಗೆ ಅವಧಿ ವಿಸ್ತರಣೆ
ಉಡುಪಿ, ಅ.12: ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನ ಪಡೆಯು ವವರು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಜೀವಂತ ಪ್ರಮಾಣ ಪತ್ರವನ್ನು ನಿವೃತ್ತಿ ವೇತನ ಬಟವಾಡೆ ಮಾಡುವ ಬ್ಯಾಂಕಿಗೆ ಸಲ್ಲಿಸಲೇಬೇಕಿದ್ದು, ಕೊರೋನ ಕಾರಣದಿಂದ ಈ ವರ್ಷದ ಅವಧಿಯನ್ನು ಡಿಸೆಂಬರ್ ತಿಂಗಳ ಕೊನೆಯ ದಿನಾಂಕದವರೆಗೆ ವಿಸ್ತರಿಸಲಾಗಿದೆ.
ಕೋವಿಡ್-19ರಿಂದಾಗಿ ವಾರದಲ್ಲಿ ಮಂಗಳವಾರ ಮಾತ್ರ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದಾರರು ಮಂಗಳವಾರದಂದು ನಿವೃತ್ತಿ ವೇತನ ಪಾವತಿ ಆದೇಶ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಪುಸ್ತಕ ಮತ್ತು ಮೊಬೈಲ್‌ನೊಂದಿಗೆ ಬ್ಯಾಂಕಿಗೆ ಹೋಗಿ ಜೀವಂತ ಪ್ರಮಾಣಪತ್ರ ಸಲ್ಲಿಸುವಂತೆ ನಿವೃತ್ತರ ಸಂಘದ ಕಾರ್ಯದರ್ಶಿ ಎಸ್.ಎಸ್. ತೋನ್ಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





