ಕೋವಿಡ್-19ನಿಂದ ಮಾನಸಿಕ ಆರೋಗ್ಯಕ್ಕೆ ತೊಡಕು: ಡಾ.ಸಿ.ಆರ್.ಚಂದ್ರಶೇಖರ್
ಉಡುಪಿ, ಅ.12: ಜಾಗತಿಕ ಮಟ್ಟದಲ್ಲಿ ಎದುರಾದ ಕೋವಿಡ್-19 ಎಂಬ ಮಹಾಮಾರಿಯಿಂದ ಮಾನಸಿಕ ಆರೋಗ್ಯಕ್ಕೆ ತೊಡಕಾಗಿದೆ. ಹೀಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸವಾಲು ಎಲ್ಲರ ಮುಂದಿದೆ ಎಂದು ಬೆಂಗಳೂರು ಸಮಾಧಾನ ಕೌನ್ಸಲಿಂಗ್ ಟ್ರಸ್ಟ್ ಸೆಂಟರ್‌ನ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದ್ದಾರೆ.
ಉಡುಪಿ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ ಮತ್ತು ಮನಃ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶ್ವ ಆರೋಗ್ಯ ಮಾನಸಿಕ ದಿನದ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ‘ನಕರಾತ್ಮಕ ಭಾವನೆ ಗಳಿಂದ ಹೊರಬರುವುದು ಹೇಗೆ’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.
ಅಹಿತಕರವಾದ ಭಾವನೆಗಳು ಮಾನಸಿಕ ನೆಮ್ಮದಿಯನ್ನು ಹಾಳುಗೆಡಿಸುತ್ತದೆ. ಇಂತಹ ನಕರಾತ್ಮಕ ಭಾವನೆಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಸನ್ನಿವೇಶಕ್ಕೆ ಅನುಗುಣವಾಗಿ ಭಾವನೆಗಳನ್ನು ಪ್ರಕಟ ಮಾಡುವ ಸಾಮರ್ಥ್ಯವನ್ನು ಮಾನವ ಜೀವಿ ಹೊಂದಿದ್ದಾನೆ ಎಂದರು.
ಶೇ.80ರಷ್ಟು ಮಾನಸಿಕ ಕಾಯಿಲೆಗಳು ಒತ್ತಡದಿಂದ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇತ್ತೀಚಿನ ಕಾಲಘಟ್ಟದಲ್ಲಿ ಮಕ್ಕಳು ಹೆಚ್ಚಾಗಿ ನಕರಾ ತ್ಮಕ ಭಾವೋದ್ವಗಕ್ಕೆ ಒಳಗಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಮಕ್ಕಳು ವ್ಯಕ್ತಪಡಿಸುವ ಭಾವನೆಗಳ ಕುರಿತು ಗಮನ ಹರಿಸುವುದು ಸೂಕ್ತ. ನಕರಾತ್ಮಕ ವ್ಯಕ್ತಿಗೆ ಮಾನಸಿಕ ಧೈರ್ಯ ನೀಡುವುದು ಅಗತ್ಯ. ಹೀಗಿದ್ದಾಗ ಮಾತ್ರ ನಕಾರಾತ್ಮಕ ಭಾವನೆ ಗಳಿಂದ ಹೊರ ಬರಲು ಸಾಧ್ಯ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ವಹಿಸಿದ್ದರು. ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಾಣಿ ಆರ್.ಬಲ್ಲಾಳ್, ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಮ್ಯ, ಕಾರ್ಯಕ್ರಮದ ಸಂಘಟಕಿ ಪ್ರಜ್ಞಾ ಕೃಷ್ಣನ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಸೋಜನ್ ಕೆ.ಜಿ. ಸ್ವಾಗತಿಸಿ, ಪ್ರಾಸ್ತಾ ವಿಕವಾಗಿ ಮಾತನಾಡಿದರು. ಮನೋವಿಜ್ಞಾನ ವಿಭಾಗದ ಹಳೆವಿದ್ಯಾರ್ಥಿನಿ ಸುಮಲತಾ ಬಜಗೋಳಿ ಕಾರ್ಯಕ್ರಮ ನಿರೂಪಿಸಿದರು. ಮೋಹೆರ್ ಶೆಟ್ಟಿ ವಂದಿಸಿದರು.







