ಇಬ್ರಾಹಿಂ ಸಾಹೇಬ್ರಿಗೆ ‘ಗೆಳೆಯರ ಬಳಗ ಕಾರಂತ’ ಪುರಸ್ಕಾರ

ಸಾಲಿಗ್ರಾಮ, ಅ.12: ಕಾರ್ಕಡ ಗೆಳೆಯರ ಬಳಗದ ವತಿಯಿಂದ ರವಿವಾರ ಕಾರ್ಕಡದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಡಾ.ಕೋಟ ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಚ್. ಇಬ್ರಾಹಿಂ ಸಾಹೇಬ್ರಿಗೆ ಗೆಳೆಯರ ಬಳಗ ಕಾರಂತ ಪುರಸ್ಕಾರ-2020ನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಬ್ರಾಹಿಂ, ಕಾರಂತರ ಚಿಂತನಧಾರೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರನ್ನು ನಿರಂತರ ಸ್ಮರಿಸಲು ಅವರ ಪುತ್ಥಳಿಗಳು ರಾಜ್ಯ ಎಲ್ಲ ಕಡೆ ಸ್ಥಾಪನೆಗೊಂಡು, ಮುಂದಿನ ಜನಾಂಗಕ್ಕೆ ಕುತೂಹಲ ಮೂಡಿಸುವ ಪ್ರಯತ್ನ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನರೇಂದ್ರ ಕುಮಾರ್ ಕೋಟ, ಕಾರಂತರ ಸಂಸ್ಮರಣೆ ಮಾಡಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶುಭಾಶಂಸನೆಗೈದರು.
ಕಲಾ ಸಾಹಿತಿ ಎಚ್.ಜನಾರ್ಧನ ಹಂದೆ ಕಾರಂತರ ಬಗ್ಗೆ ಬರೆದ ಸ್ವರಚಿತ ಕವನವನ್ನು ವಾಚಿಸಿದರು. ಪ್ರಕಾಶ ಉಪಾಧ್ಯಾಯ ಕಾರಂತರು ಕಲಿತ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಹಾಯ ಧನವನ್ನು ಮುಖ್ಯೋಪಧ್ಯಾ ಯಿನಿ ಪುಷ್ಪಹೊಳ್ಳ ಅವರಿಗೆ ಹಸ್ತಾಂತರಿಸಿದರು.
ಮಾಲಿನಿ ಮಲ್ಯ ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರು. ಬಳಗದ ಉಪಕಾರ್ಯದರ್ಶಿ ಕೆ.ಜಗದೀಶ ಆಚಾರ್ಯ ಪುರಸ್ಕಾರ ಪತ್ರ ವಾಚಿಸಿದರು. ಬಳಗದ ಉಪಾಧ್ಯಕ್ಷ ಕೆ.ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ. ಚಂದ್ರಕಾಂತ ನಾಯರಿ ವಂದಿಸಿದರು. ನಂತರ ಕೆ. ಚಂದ್ರಕಾಂತ ನಾಯರಿ ಸಂಯೋಜನೆಯಲ್ಲಿ ಗಾನ ನಮನ ಜರಗಿತು.







