ಕೊಲ್ಲರಕೋಡಿ: ಕಾಸ್ಕ್ ನರಿಂಗಾನ ವತಿಯಿಂದ ಶ್ರಮದಾನ

ನರಿಂಗಾನ: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನರಿಂಗಾನ ಇದರ ವತಿಯಿಂದ ಮಂಜನಾಡಿ-ನೆತ್ತಿಲಪದವು ಸಂಪರ್ಕ ರಸ್ತೆಯ ಬದಿಗಳಲ್ಲಿ ಬೆಳೆದ ಗಿಡ ಗಂಟಿಗಳನ್ನು ತೆಗೆದು, ಚರಂಡಿ ಸ್ವಚ್ಚಗೊಳಿಸಿ ಹಾಗೂ ರಸ್ತೆಯ ಬದಿಯ ಗುಂಡಿಗಳನ್ನು ಮುಚ್ಚುವ ಮೂಲಕ ಶ್ರಮದಾನ ಮಾಡಲಾಯಿತು.
ಸುಮಾರು ಒಂದುವರೆ ಕಿ.ಮೀ ಉದ್ದವಿರುವ ಈ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಹುಲ್ಲು ಮತ್ತು ಗಿಡಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತಿತ್ತು. ಈ ಹಿನ್ನೆಲೆಯಲ್ಲಿ ಕಾಸ್ಕ್ ನರಿಂಗಾನ ಕಾರ್ಯದರ್ಶಿ ನವಾಝ್ ಎಂ.ಬಿ ಅವರ ನೇತೃತ್ವದಲ್ಲಿ ಶ್ರಮದಾನ ನಡೆಸಲಾಯಿತು.
“ಇಲ್ಲಿ ಸುಮಾರು ಎರಡು ವರ್ಷದಿಂದ ರಸ್ತೆಯ ಎರಡು ಬದಿಗಳಲ್ಲಿ ಹುಲ್ಲು ಮತ್ತು ಗಿಡಗಳು ತುಂಬಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಆದರೆ ಈ ಬಗ್ಗೆ ಗ್ರಾಪಂ ಗಮನ ಹರಿಸಿಲ್ಲ. ಹೀಗಾಗಿ ಕಾಸ್ಕ್ ನರಿಂಗಾನ ಯುವಕರ ತಂಡ ತಮ್ಮ ಖರ್ಚಿನಲ್ಲೇ ಶ್ರಮದಾನದ ಮೂಲಕ ರಸ್ತೆಯ ಬದಿ ಸ್ವಚ್ಚ ಮಾಡಿದ್ದೇವೆ. ಇಲ್ಲಿ ಗ್ರಾಪಂ ಮಾಡಬೇಕಾದ ಕೆಲಸವನ್ನು ಇಲ್ಲಿನ ಯುವಕರೇ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಸ್ಕ್ ನರಿಂಗಾನ ಸದಸ್ಯರು, ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.”
ಈ ಸಂದರ್ಭ ಕಾಸ್ಕ್ ನರಿಂಗಾನ ಅಧ್ಯಕ್ಷ ಸಲಾಂ ಎಂ.ಎಚ್, ಇಕ್ಬಾಲ್ ಎಸ್.ಎಚ್ ಆಸಿಪ್ ಕೆ.ಎಚ್, ಮುಸ್ತಫ ಪಿ.ಎಂ, ಶರೀಫ್, ಅನೀಫ್ ಚೌಕ, ರಿಯಾಝ್, ಯೂಸುಫ್, ಸಾಜಿದ್, ಪೈಝಲ್, ಜಲೀಲ್, ರಿಫಾಝ್ ಹಾಗೂ ಇತರರು ಭಾಗವಹಿಸಿದರು.



















