ನಟಿ ಪ್ರಣೀತಾ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ದೂರು

ನಟಿ ಪ್ರಣೀತಾ
ಬೆಂಗಳೂರು, ಅ.12: ಸಿನೆಮಾ ನಟಿ ಪ್ರಣೀತಾ ಹೆಸರಿನಲ್ಲಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಎಸ್.ವಿ ಗ್ರೂಪ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಕಂಪೆನಿಯ ವ್ಯವಸ್ಥಾಪಕನನ್ನು ಸಂಪರ್ಕಿಸಿದ ದುಷ್ಕರ್ಮಿಗಳು, ನಟಿ ಪ್ರಣೀತಾ ಅವರ ಆಪ್ತ ಸಹಾಯಕರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ನಟಿಯನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ 13.5 ಲಕ್ಷ ರೂ. ಹಣ ವಸೂಲಿ ಮಾಡಿಕೊಂಡು, ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮುಹಮ್ಮದ್ ಝುನೈದ್, ವರ್ಷಾ ಎಂಬುವರ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





