ಮೂಡುಬಿದಿರೆ: ಯುವಕ ಆತ್ಮಹತ್ಯೆ
ಮೂಡುಬಿದಿರೆ: ಇಲ್ಲಿನ ಹಳೇ ಪೊಲೀಸ್ ಬಳಿಯ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಮೂಡುಬಿದಿರೆ ನಿವಾಸಿ ದಿ. ಉಪೇಂದ್ರ ಪೈ ಅವರ ಪುತ್ರ ರಾಘವೇಂದ್ರ ಪೈ ಯಾನೆ ರಾಘು ಪೈ(32) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಲವು ವರ್ಷದಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದ ಈತ ಕೆಲವು ತಿಂಗಳಿಂದ ಆಟೋ ರಿಕ್ಷಾ ಮಾರಾಟ ಮಾಡಿ ಇತರ ವಾಹನಗಳಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ರವಿವಾರ ರಾತ್ರಿ 8 ಗಂಟೆಯ ವೇಳೆ ಮನೆಯಿಂದ ಹೊರ ಹೋದವರು ಮರಳಿ ಮನೆಗೆ ಬಾರದಿರುವುದನ್ನು ಕಂಡು ತಾಯಿ, ಇತರರ ಬಳಿ ವಿಚಾರಿಸಿದ್ದಾರೆ. ಆದರೆ ಸೊಮವಾರ ಬೆಳಗ್ಗೆ ಮನೆ ಸಮೀಪವಿದ್ದ ಬಾವಿ ಬಳಿ ನೋಡುವಾಗ ಆತ ತನ್ನ ತಾಯಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





