ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ QWIK - 20 ಕಾರ್ಯಕ್ರಮ

ಮಂಗಳೂರು : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ QWIK-20 Q-TEAM MEMBERS MEET ಕಾರ್ಯಕ್ರಮವು ಡಿವಿಷನ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ , ಕಾಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ ವೆಸ್ಟ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಸಖಾಫಿ , ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಕಾವಳಕಟ್ಟೆ ಕ್ಯೂ - ಟೀಮ್ ಸದಸ್ಯರಿಗೆ ವಿಷಯ ಮಂಡನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯರಾದ ಆರೀಫ್ ಝುಹುರಿ ಮುಕ್ಕ , ದ.ಕ ವೆಸ್ಟ್ ಝೋನ್ ಪ್ರ.ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ, ದ.ಕ ವೆಸ್ಟ್ ಝೋನ್ ಸದಸ್ಯರಾದ ಇಬ್ರಾಹಿಂ ಅಹ್ಸನಿ ಮಂಜನಾಡಿ, ರಿಝ್ವಾನ್ ಕೃಷ್ಣಾಪುರ, ಕೆ.ಸಿ.ಎಫ್ ನಾಯಕರಾದ ಫಾರೂಕ್ ಕಾಟಿಪಳ್ಳ ಹಾಗೂ ಡಿವಿಷನ್ ಕಾರ್ಯಕರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರ. ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಸ್ವಾಗತಿಸಿ, ಕ್ಯೂ - ಟೀಮ್ ಡಿವಿಷನ್ ಉಸ್ತವಾರಿ ಹಕೀಮ್ ಸಖಾಫಿ , ಕಾಟಿಪಳ್ಳ ವಂದಿಸಿದರು.







.jpeg)

