ಸಾವಿನಲ್ಲೂ ಒಂದಾದ ದಂಪತಿ: ಅಕ್ಕಪಕ್ಕದಲ್ಲೇ ಅಂತ್ಯಕ್ರಿಯೆ

ಬಳ್ಳಾರಿ, ಅ.13: ಪತ್ನಿ ಸಾವನ್ನಪ್ಪಿದ ಮರುದಿನವೇ ಪತಿಯೂ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಾಳ್ಯಾದಲ್ಲಿ ನಡೆದಿದೆ.
ಓಬಣ್ಣ(58) ಮತ್ತು ಪತ್ನಿ ನಿಂಗಮ್ಮ(47) ಸಾವಿನಲ್ಲೂ ಒಂದಾದ ದಂಪತಿ. ಪತ್ನಿ ನಿಂಗಮ್ಮ ಅನಾರೋಗ್ಯದ ಕಾರಣದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದರು. ಆ ರಾತ್ರಿ ಪೂರ್ತಿ ಅವರ ಪಕ್ಕದಲ್ಲೇ ಇದ್ದ ಪತಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಸಾವಿನಲ್ಲೂ ಒಂದಾದ ಈ ಜೋಡಿಯನ್ನು ಕಂಡು ಇಡೀ ಊರೇ ಕಂಬನಿ ಮಿಡಿದಿದ್ದು, ಅಕ್ಕಪಕ್ಕದಲ್ಲೇ ದಂಪತಿಯ ಪಾರ್ಥೀವ ಶರೀರವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
Next Story





