ಬ್ರಿಟನ್: ಪ್ರಧಾನಿಯಿಂದ 3 ಹಂತಗಳ ಲಾಕ್‌ಡೌನ್ ಘೋಷಣೆ

ಲಂಡನ್, ಅ. 13: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಸೋಮವಾರ ದೇಶದಲ್ಲಿ ಹೊಸದಾಗಿ ಮೂರು ಹಂತಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಅದರಂತೆ, ಸ್ಥಳೀಯ ಕೊರೋನ ವೈರಸ್ ಹರಡುವಿಕೆಯ ಪ್ರಮಾಣವನ್ನು ಆಧರಿಸಿ ದೇಶಾದ್ಯಂತ ಮಧ್ಯಮ, ತೀವ್ರ ಅಥವಾ ಅತ್ಯಂತ ತೀವ್ರ ಲಾಕ್‌ಡೌನ್ ಜಾರಿಗೆ ತರಲಾಗುತ್ತದೆ.
ಕೊರೋನ ವೈರಸ್ ಹರಡುವಿಕೆ ಗರಿಷ್ಠ ಪ್ರಮಾಣದಲ್ಲಿ ಇರುವ ಸ್ಥಳಗಳಲ್ಲಿ ‘ಅತ್ಯಂತ ತೀವ್ರ’ ಲಾಕ್‌ಡೌನ್ ಜಾರಿಗೆ ಬರಲಿದೆ. ಅಂಥ ಸ್ಥಳಗಳಲ್ಲಿ ಮನೆಯೊಳಗಾಗಲಿ, ಹೊರಗಾಗಲಿ ಸಾಮಾಜಿಕ ಕೂಟಗಳಿಗೆ ನಿಷೇಧ ಹೇರಲಾಗಿದೆ. ಅದೂ ಅಲ್ಲದೆ, ಪಬ್‌ಗಳು ಮತ್ತು ಇತರ ಆತಿಥ್ಯ ಉದ್ಯಮಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು.
ನೂತನ ಲಾಕ್‌ಡೌನ್ ನಿಯಮಗಳ ಬಗ್ಗೆ ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸದರು ಚರ್ಚೆ ಆರಂಭಿಸಿದ್ದಾರೆ. ನೂತನ ನಿಯಮಗಳು ಬುಧವಾರದಿಂದ ಜಾರಿಗೆ ಬರಲಿವೆ.
Next Story





