ಭಾರೀ ಮಳೆಗೆ ಗೋಡೆ ಕುಸಿದು 2 ತಿಂಗಳ ಮಗು ಸಹಿತ 9 ಮಂದಿ ಮೃತ್ಯು
ಹೈದರಾಬಾದ್: ತಡರಾತ್ರಿ ಸುರಿದ ಭಾರೀ ಮಳೆಗೆ ಕಂಪೌಂಡ್ ಗೋಡೆಯೊಂದು ಕುಸಿದು 10 ಮನೆಗಳ ಮೇಲೆ ಬಿದ್ದ ಪರಿಣಾಮ ಎರಡು ತಿಂಗಳ ಮಗು ಸಹಿತ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮೃತ ದೇಹಗಳು ಕಟ್ಟಡದ ಅವಶೇಷಗಳಡಿ ಸಿಲುಕಿವೆ. ತೆಲಂಗಾಣ ಹಾಗೂ ನೆೆರೆಯ ಆಂಧ್ರಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ರಸ್ತೆಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ 48 ಗಂಟೆಗಳಲ್ಲಿ ತೆಲಂಗಾಣದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣದ ಕನಿಷ್ಟ 14 ಜಿಲ್ಲೆಗಳು ಮಳೆಯಿಂದ ಬಾಧಿತವಾಗಿವೆ. ಹೈದರಾಬಾದ್ನ ಹಲವು ಭಾಗಗಳಲ್ಲಿ ನೆರೆ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
Next Story