ಚಕ್ರಬಡ್ಡಿ ಮನ್ನಾಅನುಷ್ಠಾನಕ್ಕೆ ಇನ್ನಷ್ಟು ಸಮಯ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್
ನವೆಂಬರ್ 2ಕ್ಕೆ ಹೊಸ ಗಡುವು ನಿಗದಿ

ಹೊಸದಿಲ್ಲಿ: ಎರಡು ಕೋಟಿ ರೂ. ತನಕದ ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಜಾರಿಗೆ ಒಂದು ತಿಂಗಳ ಸಮಯ ನೀಡಬೇಕೆಂಬ ಕೇಂದ್ರ ಸರಕಾರದ ಮನವಿಯನ್ನುಇಂದು ತಿರಸ್ಕರಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಈಗಾಗಲೇ ನಿರ್ಧಾರವನ್ನು ಕೈಗೊಂಡಿದ್ದು, ಇದನ್ನು ಅನುಷ್ಠಾನಕ್ಕೆ ತರಲು ಇನ್ನಷ್ಟು ಸಮಯ ಏಕೆ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದೆ. ಒಂದು ನಿರ್ದಿಷ್ಟ ವಿಧಿವಿಧಾನಗಳಿಗಾಗಿ ಸಮಯದ ಅಗತ್ಯವಿದೆ ಎಂದು ಕೇಂದ್ರ ಸರಕಾರ ವಾದಿಸಿತು. ಆದರೆ ನ್ಯಾಯಾಲಯ ನವೆಂಬರ್ 2ಕ್ಕೆ ಹೊಸ ಗಡುವು ನಿಗದಿಪಡಿಸಿದೆ.
"ಸಾಮಾನ್ಯ ಜನರ ದೀಪಾವಳಿಯು ಈಗ ಸರಕಾರದ ಕೈಯ್ಯಲಿದೆ''ಎಂದು ತ್ರಿಸದಸ್ಯ ಪೀಠದಲ್ಲಿರುವ ನ್ಯಾಯಾಧೀಶ ಎಂ.ಆರ್. ಶಾ ಹೇಳಿದರು.
ಸಾಮಾನ್ಯ ಜನರು ಚಿಂತಿತರಾಗಿದ್ದಾರೆ.2 ಕೋಟಿ ರೂ.ವರೆಗಿನ ಸಾಲ ಪಡೆದಿರುವವರ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಪೀಠ ಹೇಳಿದೆ. ಕೊರೋನ ವೈರಸ್ ಪ್ರೇರಿತ ಲಾಕ್ ಡೌನ್ ನಿಂದಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಜನರಿಗೆ ಪರಿಹಾರ ನೀಡುವ ಮಾರ್ಗವನ್ನು ಕಂಡು ಹಿಡಿಯಲು ನ್ಯಾಯಾಲಯ ಒತ್ತಾಯಿಸುತ್ತಿದೆ.
Next Story





