ಕಿನ್ಯ: ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮ

ಮಂಗಳೂರು: ಇತ್ತೀಚೆಗೆ ಅಗಲಿದ ಖ್ಯಾತ ವಿದ್ವಾಂಸ ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದ್ ರವರ ವಿಯೋಗವು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಕರ್ಮ ಶಾಸ್ತ್ರದಲ್ಲಿ ಅವರಿಗಿದ್ದ ಅರಿವು ಅಗಾಧವಾಗಿತ್ತು. ಪವಿತ್ರ ಇಸ್ಲಾಮಿನ ನೈಜ ಆದರ್ಶ ಅಹ್ಲುಸ್ಸುನ್ನತಿ ವಲ್ ಜಮಾಅಃದಲ್ಲಿ ವಿಶ್ವಾಸವಿರುವ ನಾವೆಲ್ಲರೂ ಊರಿನಲ್ಲಿ ಬಹಳ ಅನ್ಯೋನ್ಯತೆ, ಒಗ್ಗಟ್ಟು, ಪ್ರೀತಿಯಿಂದ ಬದುಕಬೇಕೆಂದು ಕಿನ್ಯ ಕೇಂದ್ರ ಜಮಾಅತ್ ಅಧ್ಯಕ್ಷ ಕೆ.ಸಿ ಇಸ್ಮಾಯಿಲ್ ಹಾಜಿ ಕರೆ ನೀಡಿದರು.
ಕಿನ್ಯ ಪ್ರದೇಶದ ಸುನ್ನೀ ಸಂಘಟನೆಗಳಾದ ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಮತ್ತು ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿ ವತಿಯಿಂದ ನಡೆದ ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದ್ ರವರ ಅನುಸ್ಮರಣಾ ಸಂಗಮದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದ್ ರವರ ಅಗಲಿಕೆಯು ಸಮಾಜದಕ್ಕೆ ವಿಶೇಷವಾಗಿ ವಿದ್ವಾಂಸ ವರ್ಗಕ್ಕೆ ಸಹಿಸಲಸಾಧ್ಯವಾದ ನಷ್ಟವನ್ನುಂಟು ಮಾಡಿದೆ. ಆ ನಷ್ಟವನ್ನು ಪರಿಹರಿಸಲಸಾಧ್ಯವಾದರೂ ಅವರು ಇಷ್ಟೊಂದು ಉನ್ನತ ಸ್ಥಾನಕ್ಕೆ ಬೆಳೆಯಲು ಕಾರಣವಾದ ಪವಿತ್ರ ಇಸ್ಲಾಮಿನ ಜ್ಞಾನವನ್ನು ಆಲವಾಗಿ ಕಲಿಯಲು ನಾವೆಲ್ಲಾ ಪ್ರಯತ್ನಿಸಬೇಕೆಂದು ಹೇಳಿದರು.
ಬೇಕಲ್ ಉಸ್ತಾದ್ ರವರ ಪುತ್ರ ಅಬ್ದುಲ್ ಜಲೀಲ್ ಮಾತನಾಡಿ, ಕೌಟುಂಬಿಕ ಸಂಬಂಧವನ್ನು ಕಟ್ಟಿಗೊಳಿಸಲು ಹಾಗೂ ಸುನ್ನೀ ಆದರ್ಶದಿಂದ ವ್ಯತಿಚಲಿಸದಂತೆ ಬದುಕಲು ನನ್ನ ತಂದೆಯವರು ನಮಗೆ ನೀಡಿದ ಕೊನೆಯ ಉಪದೇಶ ಎಂದು ತಿಳಿಸಿದರು.
ಶಾಸಕ ಯು.ಟಿ ಖಾದರ್ ಮಾತನಾಡಿ, ತಾಜುಲ್ ಫುಖಹಾಅ್ ಶೈಖುನಾ ಬೇಕಲ್ ಉಸ್ತಾದ್ ರವರು ಪವಿತ್ರ ಕುರ್ಆನ್, ಹದೀಸ್ ಮತ್ತು ಇಸ್ಲಾಮಿನ ಇತರ ಗ್ರಂಥಗಳನ್ನು ಬಹಳ ಅಧ್ಯಯನ ಮಾಡಿದ ಖ್ಯಾತ ವಿದ್ವಾಂಸರಾಗಿದ್ದರು. ಅವರಂತಹ ವಿದ್ವಾಂಸ ನಾಯಕರ ಆದೇಶಗಳನ್ನು ಜೀವನದಲ್ಲಿ ಅಳವಡಿಸಿದರೆ ಸಮಾಜದಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ ಎಂದು ಹೇಳಿದರು.
ಸಯ್ಯಿದ್ ಜಲಾಲುದ್ದೀನ್ ತಂಙಳ್ ಆದೂರು ಪ್ರಾರಂಭದಲ್ಲಿ ಪ್ರಾರ್ಥನೆ ನಡೆಸಿ ಶುಭ ಹಾರೈಸಿದರು. ಕೊನೆಯಲ್ಲಿ ಸಯ್ಯಿದ್ ಅಲವಿ ತಂಙಳ್ ಮೀಂಪ್ರಿ ಪ್ರಾರ್ಥನೆ ಮಾಡಿದರು. ಬುಖಾರಿ ಜುಮುಅ ಮಸ್ಜಿದ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ ಸಂದೇಶ ಭಾಷಣ ಮಾಡಿದರು. ಝಿಕ್ರ್ ಮಜ್ಲಿಸ್ ಗೆ ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ನೇತೃತ್ವ ನೀಡಿದರು.
ಸಯ್ಯಿದ್ ಶಿಹಾಬುದ್ದೀನ್ ಅಲ್ ಹುಮೈದಿ ತಂಙಳ್ ಮೀಂಪ್ರಿ, ಕಿನ್ಯ ಕೇಂದ್ರ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಾದರ್ (ಕಾಯಿಂಞಿ) ಹಾಜಿ ಮೀನಾದಿ, ಕೋಶಾಧಿಕಾರಿ ಸಾದುಕುಂಞಿ (ಬಾವು) ಹಾಜಿ ಸಾಗ್ ಬಾಗ್, ಬುಖಾರಿ ಜುಮುಅ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ನಾಟೆಕಲ್, ದುಬೈ ಸುನ್ನೀ ಸಂಘ ಸಂಸ್ಥೆಗಳ ನಾಯಕ ಇ.ಕೆ ಇಬ್ರಾಹಿಂ ಕುಂಞಿ, ಪನೀರ್ ಜುಮಾ ಮಸ್ಜಿದ್ ಅಧ್ಯಕ್ಷ ಹುಸೈನ್ ಹಾಜಿ, ಎಸ್.ವೈ.ಎಸ್ ರಾಜ್ಯ ಸಮಿತಿ ನಾಯಕ ಕೆ.ಎಚ್ ಇಸ್ಮಾಯಿಲ್ ಸಅದಿ, ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿ ಖಲೀಲ್ ಮುಸ್ಲಿಯಾರ್, ಖುತುಬಿನಗರ ಜಮಾಅತ್ ಅಧ್ಯಕ್ಷ ಅಬ್ಬಾಸ್ ಮೀನಾದಿ, ಉಕ್ಕುಡ ಜಮಾಅತ್ ಅಧ್ಯಕ್ಷ ಇಬ್ರಾಹಿಂ, ಮೀಂಪ್ರಿ ಮಸೀದಿ ಇಮಾಂ ಅಬ್ದುಲ್ ಹಮೀದ್ ಉಸ್ತಾದ್, ಅಧ್ಯಕ್ಷ ಮೊಯಿದಿನ್ ಮೀಂಪ್ರಿ, ಪಂಚಾಯತ್ ಉಪಾಧ್ಯಕ್ಷ ಸಿರಾಜ್ ಮೀನಾದಿ, ಸದಸ್ಯರಾದ ಅಬ್ದುಲ್ ಹಮೀದ್, ಫಾರೂಖ್ ಕಿನ್ಯ, ಎಸ್.ವೈ.ಎಸ್ ದೇರಳಕಟ್ಟೆ ಸೆಂಟರ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಎಂ ಇಸ್ಮಾಯಿಲ್ ಮೀಂಪ್ರಿ, ಎಸ್.ಎಂ.ಎ ತಲಪಾಡಿ ನಾಯಕ ಪಿಲಿಕೂರು ಬಾವ ಹಾಜಿ, ಎಸ್.ವೈ ಎಸ್ ಖುತುಬಿನಗರ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಪರಮಾಂಡ, ಕುರಿಯ-ರಹ್ಮತ್ ನಗರ ಅಧ್ಯಕ್ಷ ಉಸ್ಮಾನ್ ಝುಹ್ರಿ, ಬೆಳರಿಂಗೆ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯಿಲ್ ಸಾಗ್, ಎಸ್.ವೈ.ಎಸ್ ಉಕ್ಕುಡ ಅಧ್ಯಕ್ಷ ಹಸೈನಾರ್, ಮೀಂಪ್ರಿ ಅಧ್ಯಕ್ಷ ಆಲಿಕುಂಞಿ, ಬದ್ರಿಯ್ಯಾನಗರ ಪ್ರಧಾನ ಕಾರ್ಯದರ್ಶಿ ನಾಸಿರ್ ಉಸ್ತಾದ್, ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಉಪಾಧ್ಯಕ್ಷ ಇಸ್ಮಾಯಿಲ್ ಫಯಾಝ್, ಪ್ರಧಾನ ಕಾರ್ಯದರ್ಶಿ ಬಷೀರ್ ಕೂಡಾರ, ಶೇಖಾ ಮರ್ಕಝ್ ಸಮಿತಿ ಅಧ್ಯಕ್ಷ ಅಬೂಬಕರ್ ಖುತುಬಿನಗರ, ಅನ್ಸಾರುಲ್ ಮಸಾಕೀನ್ ಅಧ್ಯಕ್ಷ ಸಿದ್ದೀಖ್ ಕಲ್ಲಾಂಡ, ಖುತುಬಿಯ್ಯಾ ಹಳೇ ವಿದ್ಯಾರ್ಥಿ ಅಧ್ಯಕ್ಷ ಮುಹಮ್ಮದ್ ರಹ್ಮತ್ ನಗರ, ಬುಖಾರಿ ಜಮಾಅತ್ ಪ್ರಮುಖರಾದ ಅಬ್ಬಾಸ್, ವಿ.ಎ.ಮುಹಮ್ಮದ್ ಉಸ್ತಾದ್, ಮೂಸಕುಂಞಿ ಬದ್ರಿಯ್ಯಾನಗರ, ಅಶ್ರಫ್, ಅಬ್ದುಲ್ ಹಮೀದ್ ಮೀಂಪ್ರಿ, ನೂರುಲ್ ಉಲಮಾ ಮದ್ರಸ ಅಧ್ಯಾಪಕರಾದ ಹೈದರ್ ಉಸ್ತಾದ್, ಇರ್ಷಾದ್ ಉಸ್ತಾದ್, ಕೆಸಿಎಫ್ ಮದೀನ ಅಲ್ ಮುನವ್ವರ ಪ್ರತಿನಿಧಿ ಇಬ್ರಾಹಿಂ ಖಲೀಲ್ ಬೆಳರಿಂಗೆ ಸೇರಿ ಅನೇಕ ನಾಯಕರು, ಊರಿನ ಗಣ್ಯರು ಭಾಗವಹಿಸಿದ್ದರು.
ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.








