ವಾಮಾಚಾರದ ಆರೋಪ: ವೃದ್ಧನ ಜೀವಂತ ದಫನ
ಗುವಾಹಟಿ, ಅ. 14: ವಾಮಾಚಾರದ ಆರೋಪದಲ್ಲಿ 80 ವರ್ಷದ ವೃದ್ಧರೋರ್ವರನ್ನು ಅವರ ಕುಟುಂಬವೇ ಜೀವಂತವಾಗಿ ದಫನ ಮಾಡಿದ ಘಟನೆ ಮೇಘಾಲಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮೃತ ವ್ಯಕ್ತಿಯ ಮೂವರು ಸೋದರಳಿಯರು ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೈಕಾಲುಗಳನ್ನು ಕಟ್ಟಿ, ಮುಖ ಮುಚ್ಚಿ ಐದು ಅಡಿ ಆಳದಲ್ಲಿ ದಫನ ಮಾಡಲಾಗಿದ್ದ ವೃದ್ಧನ ಮೃತದೇಹವನ್ನು ಪೊಲೀಸರು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಕ್ಟೋಬರ್ 7ರಂದು ರಾತ್ರಿ ನಡೆದ ಈ ಘಟನೆಗೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಪೊಲೀಸ್ ಅಧೀಕ್ಷಕ ಹರ್ಬಟ್ ಲಿಂಗ್ಡೋ ತಿಳಿಸಿದ್ದಾರೆ.
Next Story