ಉಡುಪಿ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ‘ತಪ್ಪುಗಳು’, ಜಿಲ್ಲಾಡಳಿತ ಸಹಕಾರ : ಬಿ.ಕೆ.ಹರಿಪ್ರಸಾದ್ ಆರೋಪ
ಉಡುಪಿ, ಅ.15: ಜಿಲ್ಲೆಯ ಬೂತ್‌ಮಟ್ಟದ ಮತದಾರರ ಪಟ್ಟಿಯಲ್ಲಿ ಅನೇತ ‘ತಪ್ಪು’ಗಳು ಕಂಡುಬಂದಿವೆ. ಒಂದೇ ಕುಟುಂಬದ ನಾಲ್ವರು ಸದಸ್ಯ ರನ್ನು ಬೇರೆ ಬೇರೆ ಬೂತ್‌ಗಳಿಗೆ ಸೇರಿಸಲಾಗಿದೆ. ಜನರಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಗಳನ್ನು ಮೂಡಿಸಲು ಹಾಗೂ ಒಂದು ರಾಜಕೀಯ ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ಜಿಲ್ಲಾಡಳಿತವೇ ಇದನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದ ಮತದಾರರ ಪಟ್ಟಿಯಲ್ಲಿ ಭಾರೀ ತಪ್ಪುಗಳು ಕಂಡುಬಂದಿವೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲು ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದರು.
ಹೀಗಾಗಿ ಬೂತ್ ಮಟ್ಟದಲ್ಲಿ ಆಗಿರಬಹುದಾದ ಇಂಥ ಲೋಪದೋಷ ಗಳನ್ನು ಗುರುತಿಸಲು ಬುತ್ ಮಟ್ಟದ ಏಜೆಂಟ್‌ರನ್ನು ನೇಮಿಸಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ. ನಮಗೆ ಈಗ ಸಿಕ್ಕಿರುವ ಮಾಹಿತಿಯಂತೆ ಬೂತ್‌ನಲ್ಲಿ ಒಂದೇ ಮನೆಯ ಗಂಡ-ಹೆಂಡತಿಯನ್ನು ಹೆತ್ತವರು-ಮಕ್ಕಳನ್ನು ಬೇರೆ ಬೇರೆ ಬೂತ್‌ಗಳಿಗೆ ಸೇರಿಸಲಾಗಿದೆ. ಜಿಲ್ಲಾಡಳಿತ ಕೈಜೋಡಿಸಿದಾಗ ಮಾತ್ರ ಸ್ಥಳೀಯ ಮಟ್ಟದಲ್ಲಿ ಇಂಥ ಅವ್ಯವಹಾರ, ಅಕ್ರಮಗಳಾಗಲು ಸಾಧ್ಯ ಎಂದವರು ಅಭಿಪ್ರಾಯ ಪಟ್ಟರು.
ವಾಮಮಾರ್ಗಗಳ ಮೂಲಕ ಅಧಿಕಾರಿಕ್ಕೇರಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸಹಕರಿಸುತ್ತಿದೆ. ಪ್ರತಿಯೊಂದು ಬೂತ್‌ನಲ್ಲೂ ಇಂಥ ಅವ್ಯವಸ್ಥೆ ನಡೆಯುತ್ತಿದೆ ಎಂದು ಹರಿಪ್ರಸಾದ್ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭೂಸುಧಾರಣಾ ಮಸೂದೆಯನ್ನು ಬಹುಮತವಿಲ್ಲದೆ ಅಂಗೀಕರಿಸಿದ್ದಾರೆ. ಆ ಮೂಲಕ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಅಗೌರವಗೊಳಿಸಿದ್ದಾರೆ. ಇದು ದೇಶದ ರೈತರಿಗೆ ಮರಣ ಶಾಸನವಿದ್ದಂತೆ. ಮೋದಿ ಆಡಳಿತದಲ್ಲಿ ಸರ್ವಾಧಿಕಾರ ವನ್ನು ತೋರಿಸುತ್ತಿದ್ದಾರೆ ಎಂದವರು ದೂರಿದರು.
ಇದರ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಆಂದೋಲವನ್ನು ಹಮ್ಮಿಕೊಳ್ಳಲಿದೆ. ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ದೇಶದ 5 ಕೋಟಿ ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದು, ಇದನ್ನು ರಾಷ್ಟ್ರಪತಿ ಅವರಿಗೆ ನೀಡಲಾ ಗುವುದು. ದಕ್ಷಿಣ ಕನ್ನಡದಲ್ಲಿ ಈ ಅಭಿಯಾನಕ್ಕೆ ನಮ್ಮ ನಾಯಕ ಆಸ್ಕರ್ ಫೆರ್ನಾಂಡೀಸ್ ಚಾಲನೆ ನೀಡಿದ್ದಾರೆ. ಉಡುಪಿಯಲ್ಲೂ ಈ ಅಭಿಯಾನ ನಡೆಯಲಿದೆ ಎಂದರು.
ಇದರ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಆಂದೋಲವನ್ನು ಹಮ್ಮಿಕೊಳ್ಳಲಿದೆ. ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ದೇಶದ 5 ಕೋಟಿ ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದು, ಇದನ್ನು ರಾಷ್ಟ್ರಪತಿ ಅವರಿಗೆ ನೀಡಲಾ ಗುವುದು. ದಕ್ಷಿಣ ಕನ್ನಡದಲ್ಲಿ ಈ ಅಭಿಯಾನಕ್ಕೆ ನಮ್ಮ ನಾಯಕ ಆಸ್ಕರ್ ಫೆರ್ನಾಂಡೀಸ್ ಚಾಲನೆ ನೀಡಿದ್ದಾರೆ. ಉಡುಪಿಯಲ್ಲೂ ಈ ಅಭಿಯಾನ ನಡೆಯಲಿದೆ ಎಂದರು. ರಾಜ್ಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಪ್ರಾಕೃತಿಕ ವಿಕೋಪದಿಂದ ಭಾಗೀ ಅನಾಹುತ ಸಂಭವಿಸಿದೆ. ಸಂಕಷ್ಟದ ಈ ಸಮಯದಲ್ಲಿ ಜನರ ಕಷ್ಚಗಳನ್ನು ಆಲಿಸಲು ಬಿಜೆಪಿ ನಾಯಕರಿಗೆ ಪುರುಸೋತ್ತಿಲ್ಲ. ಈವರೆಗೆ ಯಾವುದೇ ಪರಿಹಾರ ಕಾರ್ಯ ನಡೆದಿಲ್ಲ. ಅಪರಾಹ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ರೈತರನ್ನು ಕೇಳುವವರೇ ಇಲ್ಲವಾಗಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರವಾಹದಿಂದ ಅಪಾರ ನಷ್ಟ ಸಂಭವಿಸಿದೆ.ಅವರೆಲ್ಲರಿಗೂ ಸರಕಾರ ಸರಿಯಾದ ಪರಿಹಾರ ನೀಡಬೇಕು. ಬೆಳೆಹಾನಿಯಾದ ರೈತರಿಗೆ ಹಾಗೂ ಕೋವಿಡ್‌ನಿಂದ ಸಂತ್ರಸ್ಥರಾದ ಮೀನುಗಾರ ರಿಗೆ ತಕ್ಷಣ ಪರಿಹಾರ ನೀಡಬೇಕು. ಆಸ್ತಿ, ಮನೆ ಕಳೆದು ಕೊಂಡವರಿಗೂ ಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪಕ್ಷದ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಹಿರಿಯ ನಾಯಕರಾದ ಎಂ.ಎ.ಗಫೂರ್, ಗೋಪಾಲ ಪೂಜಾರಿ, ಮಂಗಳೂರಿನ ಪಿ.ವಿ.ಮೋಹನ್, ಭಾಸ್ಕರ ರಾವ್ ಕೊಡವೂರು ಉಪಸ್ಥಿತರಿದ್ದರು.
ಶರಶಯ್ಯೆಯಲ್ಲಿ ಯಡಿಯೂರಪ್ಪ
ಬಿಜೆಪಿ ಪಕ್ಷದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೀಷ್ಮಾಚಾರ್ಯರಂತೆ ಶರಶಯ್ಯೆಯಲ್ಲಿ ಮಗಲಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಅವರನ್ನು ಮನೆಗೆ ಕಳುಹಿಸಲು ಎಲ್ಲಾ ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಗಳಿಲ್ಲ. ಆದರೆ ಶಿರಾದಲ್ಲಿ ಬಿಜೆಪಿಗೆ ಯಾವುದೇ ಅಭ್ಯರ್ಥಿ ಇರಲಿಲ್ಲ. ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದವರನ್ನು ಅವರು ಕರೆದೊಯ್ದು ಟಿಕೇಟ್ ನೀಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.







