ಅ.16: ಕೆ.ಸಿ.ರೋಡ್‌ನಲ್ಲಿ ಖಾಝಿ ಸ್ವೀಕಾರ
ಕೋಟೆಕಾರ್, ಅ.15: ಇತ್ತೀಚೆಗೆ ಆಗಲಿದ ಖಾಝಿ ಬೇಕಲ್ ಉಸ್ತಾದ್ ಅವರಿಂದ ತೆರವಾದ ಸ್ಥಾನಕ್ಕೆ ನೂತನ ಖಾಝಿಯಾಗಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಅವರನ್ನು ಅಲ್ ಮುಬಾರಕ್ ಜುಮಾ ಮಸೀದಿ ಕೆ.ಸಿ.ರೋಡ್, ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ, ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ, ಅಲ್ ಹುದಾ ಜುಮಾ ಮಸ್ಜಿದ್ ಕೆ.ಸಿ. ನಗರ, ಅಲ್ ಬದ್ರಿಯಾ ಜುಮಾ ಮಸ್ಜಿದ್ ಪಂಜಲ, ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಪಿಲಿಕೂರ್, ಇಮಾದುದ್ದೀನ್ ಜುಮಾ ಮಸ್ಜಿದ್ ಮಾಡೂರು ಇಲ್ಲಿನ ಖಾಝಿಯಾಗಿ ಸ್ವೀಕರಿ ಸುವ ಕಾರ್ಯಕ್ರಮವು ಅ.16ರಂದು ಸಂಜೆ 4 ಗಂಟೆಗೆ ಕೆಸಿ ರೋಡ್ ಅಲ್ ಮುಬಾರಕ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಅಸೈಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು, ಕೆ.ಪಿ.ಹುಸೈನ್ ಸಆದಿ ಕೆಸಿ ರೋಡ್, ಇಬ್ರಾಹೀಂ ಫೈಝಿ ಉಚ್ಚಿಲ, ಡಾ. ಅಬ್ದುರ್ರಶೀದ್ ಝೈನಿ ತಲಪಾಡಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





