ಮಾಸ್ಕ್: 37,900ರೂ. ದಂಡ ವಸೂಲಿ
ಉಡುಪಿ, ಅ.16: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿರುವ 379 ಮಂದಿಯಿಂದ ಅ.15ರಂದು ಒಟ್ಟು 37900 ರೂ. ದಂಡ ವಸೂಲಿ ಮಾಡಲಾಗಿದೆ.
ನಗರ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ 800ರೂ., ಗ್ರಾಪಂ ವ್ಯಾಪ್ತಿಯಲ್ಲಿ 20,800 ರೂ., ಪೊಲೀಸ್ ಇಲಾಖೆಯು 15,300ರೂ., ಅಬಕಾರಿ ಇಲಾಖೆ ಯು 100ರೂ. ದಂಡ ವಸೂಲಿ ಮಾಡಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 11228 ಮಂದಿಯಿಂದ 12,64,350ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
Next Story





