ಶಿರ್ವದಲ್ಲಿ ಬೃಹತ್ ಜಾನುವಾರು ಉತ್ಸವ ಏರ್ಪಡಿಸಲು ಚಿಂತನೆ: ಡಾ.ಅರುಣ್‌ಕುಮಾರ್ ಹೆಗ್ಡೆ

ಶಿರ್ವ, ಅ.16: ಕೂಲಿಕಾರ್ಮಿಕರ ಸಮಸ್ಯೆ, ಆದಾಯ ಕಡಿಮೆ ಹಾಗೂ ಅರ್ಥಪೂರ್ಣ ಕೃಷಿ ಮಾಹಿತಿಯ ಕೊರತೆಯೇ ಉಡುಪಿ ಜಿಲ್ಲೆಯಲ್ಲಿ ಕೃಷಿ ಹಿಂದುಳಿಯಲು ಪ್ರಮುಖ ಕಾರಣ. ಮುಂದೆ ಶಿರ್ವದಲ್ಲಿ ಬೃಹತ್ ಜಾನುವಾರು ಉತ್ಸವ ಏರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಿರ್ವದ ಪಶುಆರೋಗ್ಯಾಧಿಕಾರಿ ಹಾಗೂ ಶಿರ್ವ ಗ್ರಾಪಂ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಕಾರ್ಯವ್ಯಾಪ್ತಿಯ 9 ಕೇಂದ್ರಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಹಕಾರದೊಂದಿಗೆ ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಕಳತ್ತೂರು ಗರಡಿಯ ಅರ್ಚಕ ವಿಶ್ವನಾಥ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿಂದ್ರ ಆಚಾರ್ಯ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ, ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ರವಿರಾಜ ಉಡುಪ, ವಿಸ್ತರಣಾಧಿಕಾರಿ ಸುಧಾಕರ್ ಭಾಗವಹಿಸಿದರು.
ಸಹಕಾರಿ ಘಟಕಗಳ ಅಧ್ಯಕ್ಷರುಗಳಾದ ಸಚ್ಚಿದಾನಂದ ಹೆಗ್ಡೆ ಶಿರ್ವ, ಹರಿಣಾಕ್ಷಿ ಎನ್.ಶೆಟ್ಟಿ ಪಂಜಿಮಾರು, ಪ್ರಕಾಶ್ ಶೆಟ್ಟಿ ಮುದರಂಗಡಿ, ಗೋಪಾಲ ನಾಯಕ್ ಎಡ್ಮೇರು, ಸುಧಾಕರ ಶೆಟ್ಟಿ ಚಂದ್ರ ನಗರ, ವೀಣಾ ಭಟ್ ಕುತ್ಯಾರು, ಮೈಕಲ್ ಕೋಡ್ದ ಸಾಂತೂರು, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾುಕೃಷ್ಣ ಶರ್ಮಾ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ವಾರಿಜಾ ಪೂಜಾರ್ತಿ ಸ್ವಾಗತಿಸಿದರು. ಪ್ರಸನ್ನ, ಸುಕೇಶ್ ಪೂಜಾರಿ ವಳದೂರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವೀರೇಂದ್ರ ಪಾಟ್ಕರ್ ವಂದಿಸಿದರು.







