Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚಲೋ ಸೂಪರ್ ಸೇವರ್ ಪ್ಲಾನ್ ಬಸ್ ಪಾಸ್ :...

ಚಲೋ ಸೂಪರ್ ಸೇವರ್ ಪ್ಲಾನ್ ಬಸ್ ಪಾಸ್ : ಪ್ರತಿ ಟ್ರಿಪ್‌ಗೆ ಸರಾಸರಿ 3.99 ರೂ. ವೆಚ್ಚದ ಪ್ರಯಾಣ

ವಾರ್ತಾಭಾರತಿವಾರ್ತಾಭಾರತಿ16 Oct 2020 10:14 PM IST
share

ಮಂಗಳೂರು, ಅ.16: ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಚಲೋ ಸೂಪರ್ ಸೇವರ್ ಪ್ಲಾನ್ ಎಂಬ ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ಯೋಜನೆಯನ್ನು ಆರಂಭಿಸಲಾಗಿದೆ. ಇದರಡಿ ಪ್ರಯಾಣಿಕರಿಗೆ ಪ್ರತಿ ಟ್ರಿಪ್‌ಗೆ ಸರಾಸರಿ 3.99 ರೂ. ವೆಚ್ಚದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು ಹೇಳಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲೋ ಸೂಪರ್ ಸೇವರ್ ಯೋಜನೆಗಳನ್ನು ಚಲೋ ಕಾರ್ಡ್‌ನಲ್ಲಿ ಖರೀದಿಸ ಬಹುದು ಮತ್ತು ಮಂಗಳೂರಿನ ಎಲ್ಲಾ ಸಿಟಿ ಬಸ್‌ಗಳಲ್ಲಿ ಮಾನ್ಯವಿರುತ್ತದೆ. ಸದ್ಯ ಮಂಗಳೂರಿನಲ್ಲಿ ಒಂದೇ ಟ್ರಿಪ್ ಬಸ್ ಟಿಕೆಟ್ ಮಾತ್ರ ನೀಡಲಾ ಗುತ್ತದೆ. ಹೊಸ ಯೋಜನೆ ಪ್ರಕಾರ 7 ದಿನಗಳು ಅಥವಾ 28 ದಿನಗಳ ಕಾರ್ಡ್ ಪಡೆದುಕೊಳ್ಳಬಹುದು. ಪ್ರಸ್ತುತ, ಸೂಪರ್ ಸೇವರ್ ಯೋಜನೆಗೆ ಳನ್ನು ಎಲ್ಲ ಮಾರ್ಗಗಳಲ್ಲಿ ಹಾಗೂ ಬಸ್‌ಗಳಲ್ಲಿ ಬಳಸಬಹುದು ಎಂದು ತಿಳಿಸಿದ್ದಾರೆ.

ದೈನಂದಿನ ಪ್ರಯಾಣಿಕರು ಒಂದು ಟ್ರಿಪ್‌ಗೆ 10 ರೂ. ಪಾವತಿ ಮಾಡುತ್ತಾರೆ. ಸೂಪರ್ ಸೇವರ್ 399 ಯೋಜನೆಯ ಕಾರ್ಡಿನೊಂದಿಗೆ ಅವರು 28 ದಿನಗಳಲ್ಲಿ 100 ಟ್ರಿಪ್ ಪ್ರಯಾಣಿಸಲು ಅವಕಾಶವಿದೆ. ಅವರು ಪ್ರತಿ ಟ್ರಿಪ್‌ಗೆ ಕೇವಲ 3.99 ರೂ. ನೀಡಿದಂತಾಗುತ್ತದೆ. ಈ ಪ್ಲಾನ್‌ಗಳನ್ನು 1 ದಿನದಲ್ಲಿ ಗರಿಷ್ಟ 4 ಟ್ರಿಪ್‌ಗಳಿಗೆ ಉಪಯೋಗಿಸಲು ಅವಕಾಶವಿದೆ ಎಂದರು.

ಚಲೋ ಸೂಪರ್ ಸೇವರ್ ಯೋಜನೆಗಳನ್ನು ಪಡೆಯಲು ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ಪಾನ್‌ಕಾರ್ಡ್ ಜೆರಾಕ್ಸ್ ಪ್ರತಿ ನೀಡಬೇಕು. ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟಡದಲ್ಲಿರುವ ದ.ಕ. ಬಸ್ ಮಾಲಕರ ಸಂಘದ ಕಚೇರಿ, ಸ್ಟೇಟ್‌ಬ್ಯಾಂಕ್ ಎದುರಿನ ಸಿಟಿ ಟವರ್ ಬಿಲ್ಡಿಂಗ್‌ ನಲ್ಲಿರುವ ಚಲೋ ಕಚೇರಿ, ಮತ್ತು ಬಲ್ಮಠ ರಸ್ತೆಯಲ್ಲಿನ ಮಾಂಡೊವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್‌ನಲ್ಲಿ ಪಡೆಯಬಹುದು. ಬಸ್ ನಿರ್ವಾಹಕರಿಂದಲೂ ಚಲೋ ಕಾರ್ಡ್ ಪಡೆಯಬಹುದು. ಶೀಘ್ರದಲ್ಲಿ ಚಲೋ ಆ್ಯಪ್‌ನಲ್ಲಿಯೂ ಖರೀದಿಗೆ ಅವಕಾಶ ನೀಡಲಾಗುವುದು. ಸದ್ಯ ನಗರ ದಲ್ಲಿ 4,000 ಚಲೋ ಕಾರ್ಡ್ ಮಾರಾಟವಾಗಿದೆ. ಸದ್ಯ ಶೇ.90ರಷ್ಟು ಸಿಟಿ ಬಸ್‌ಗಳು ಕಾರ್ಯಾಚರಿಸುತ್ತಿದೆ. ಅಕ್ಟೋಬರ್ ಅಂತ್ಯದೊಳಗೆ ಶೇ.100ರಷ್ಟು ಬಸ್ ಸಂಚರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಕೋಶಾಧಿಕಾರಿ ಸುಶೀತ್ ಶೆಟ್ಟಿ, ಚಲೋ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಸಂತೋಷ್ ದೇಶ್‌ಪಾಂಡೆ ಇದ್ದರು.

20 ರೂ. ಮೌಲ್ಯದ ಹೊಸ ಚಲೋ ಕಾರ್ಡನ್ನು ಪಡೆದು ಯಾವುದೇ ಮೊತ್ತಕ್ಕೆ ರೀಚಾರ್ಜ್ ಮಾಡಬಹುದು. 50 ರೂ. ಮೌಲ್ಯದ ಹೊಸ ಚಲೋ ಕಾರ್ಡ ಅನ್ನು ಪಡೆದು ವಾಲೆಟ್‌ನಲ್ಲಿ 30 ರೂ. ಬ್ಯಾಲೆನ್ಸ್ ಪಡೆಯಬಹುದಾಗಿದೆ. 100 ರೂ. ಮೌಲ್ಯದ ಕಾರ್ಡ್‌ನಲ್ಲಿ 80 ರೂ., 200 ರೂ. ರೀಚಾರ್ಚ್ ‌ನಲ್ಲಿ 210 ರೂ., 500 ರೂ. ರೀಚಾರ್ಚ್‌ನಲ್ಲಿ 550 ರೂ. ಮತ್ತು 1,000 ರೂ. ರೀಚಾರ್ಚ್‌ನಲ್ಲಿ 1100 ರೂ. ಪಡೆಯಬಹುದಾಗಿದೆ ಎಂದು ದಿಲ್‌ರಾಜ್ ಆಳ್ವ ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ

ಶಾಲಾ-ಕಾಲೇಜುಗಳು ಆರಂಭದ ಬಳಿಕ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಪಾಸ್ ವ್ಯವಸ್ಥೆ ಜಾರಿಗೊಳಿಸುತ್ತೇವೆ. ನ.14ರಂದು ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ಶೈಕ್ಷಣಿಕ ಅವಧಿಗೆ ಅನುಗುಣವಾಗಿ ಯೋಜನೆ ರೂಪಿಸುತ್ತೇವೆ. ಒಂದನೇ ತರಗತಿಯಿಂದ ಪಿಯುಸಿವರಗೆ ಮತ್ತು ಪದವಿ ವಿಭಾಗವಾಗಿ ವಿಂಗಡಿಸುತ್ತೇವೆ ಎಂದು ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಏಕ ಮುಖ ಪ್ರಯಾಣ ದರಗಳು 7ದಿನಗಳು, 21 ಟ್ರಿಪ್ 28 ದಿನ, 100 ಟ್ರಿಪ್

10 ರೂ.ವರೆಗೆ ಸೂಪರ್‌ಸೇವರ್ 109 ರೂ. ಸೂಪರ್ ಸೇವರ್ 399 ರೂ.
11ರೂ.ನಿಂದ 20 ರೂ.ವರೆಗೆ 159 ರೂ. 499 ರೂ.
21 ರೂ.ರಿಂದ 30 ರೂ.ವರೆಗೆ 259 ರೂ. 799 ರೂ.
31ರೂ.ನಿಂದ 40 ರೂ.ವರೆಗೆ 359 ರೂ. 999 ರೂ.
41 ರೂ.ನಿಂದ 50 ರೂ.ವರೆಗೆ 459 ರೂ. 1299 ರೂ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X