ಅ.21ರಿಂದ ನವೆಂಬರ್1ರವರೆಗೆ ಪಿಯು ಉಪನ್ಯಾಸಕರಿಗೆ ದಸರಾ ರಜೆ ಘೋಷಣೆ

ಬೆಂಗಳೂರು, ಅ.16: ಅಕ್ಟೋಬರ್ 21ರಿಂದ ನವೆಂಬರ್ 1ರವರೆಗೆ ಪಿಯು ಉಪನ್ಯಾಸಕರಿಗೆ ದಸರಾ ರಜೆ ಘೋಷಿಸಲಾಗಿದೆ.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, ‘ದಿನಾಂಕ.21.10.2020 ರಿಂದ 01.11.2020 ರವರೆಗೆ ಪದವಿಪೂರ್ವ ಶಿಕ್ಷಣ ಉಪನ್ಯಾಸಕರುಗಳಿಗೆ ದಸರಾ ರಜೆ ಘೋಷಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ತಿಳಿಸಿದ್ದಾರೆ.
ದಿನಾಂಕ.21.10.2020 ರಿಂದ 01.11.2020 ರವರೆಗೆ ಪದವಿಪೂರ್ವ ಶಿಕ್ಷಣ ಉಪನ್ಯಾಸಕರುಗಳಿಗೆ ದಸರಾ ರಜೆ ಘೋಷಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದೇನೆ.
— S.Suresh Kumar, Minister - Govt of Karnataka (@nimmasuresh) October 16, 2020
Next Story





