ಎ.ಜೆ. ಆಸ್ಪತ್ರೆಯಲ್ಲಿ 50 ಶೇ. ರಿಯಾಯಿತಿ ದರದಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣೆ
ವಿಶ್ವ ಪಾರ್ಶ್ವವಾಯು ದಿನದಂಗವಾಗಿ ಅ.19ರಿಂದ ಅ.31ರವರೆಗೆ ವಿಶೇಷ ಪ್ಯಾಕೇಜ್
ಮಂಗಳೂರು, ಅ.17: ಎ.ಜೆ. ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ 50 ಶೇ. ರಿಯಾಯಿತಿ ದರದಲ್ಲಿ ಸಮಗ್ರ ಪಾರ್ಶ್ವವಾಯು ತಪಾಸಣೆ ನಡೆಸಲಾಗುತ್ತದೆ.
ಅ.29ನ್ನು ಜಗತ್ತಿನಾದ್ಯಂತ ವಿಶ್ವ ಪಾರ್ಶ್ವವಾಯು ದಿನವಾಗಿ ಆಚರಿಸಲಾಗುತ್ತದೆ. ಇದರಂಗವಾಗಿ ಅ.19ರಿಂದ ಅ.31ರವರೆಗೆ ರಿಯಾಯಿತಿ ಅಂದರೆ ಕೇವಲ ರೂ.2,650ರಲ್ಲಿ ಈ ಪಾರ್ಶ್ವವಾಯು ತಪಾಸಣೆ ಲಭ್ಯವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಪಾರ್ಶ್ವವಾಯು ತಪಾಸಣಾ ಪ್ಯಾಕೇಜಿನ ವಿವರಗಳು ಇಂತಿವೆ:
ರಕ್ತ ಪರೀಕ್ಷಗಳು, ಎಚ್‌ಬಿ, ಆರ್‌ಬಿಎಸ್, ಕ್ರಿಯಟಿನಿನ್ ಈಸಿಜಿ, ಕ್ಯಾರೋಟಿಡ್ ಡೊಪ್ಲರ್, ತಲೆಯ ಸ್ಕಾನ್ ಹಾಗೂ ನುರಿತ ನರರೋಗ ತಜ್ಞ ವೈದ್ಯರೊಂದಿಗೆ ಸಮಾಲೋಚನೆಗೆ ಅವಕಾಶವಿದೆ. ವೈದ್ಯಕೀಯ ಸಮಾಲೋಚನೆಗೆ ನರರೋಗ ಶಾಸ್ತ್ರಜ್ಞ ಡಾ.ಸುರೇಶ ಬಿ.ವಿ. ಹಾಗೂ ಡಾ.ಸೌರಬ್ ರೈ ಲಭ್ಯರಿರುತ್ತಾರೆ. ನರರೋಗ ಶಾಸ್ತ್ರಜ್ಞರ ಸಲಹೆ ಮೇರೆಗೆ ಹೆಚ್ಚಿನ ತಪಾಸಣೆಗಳು ಅಗತ್ಯವಿದ್ದಲ್ಲಿ 25 ಶೇ. ರಿಯಾಯಿತಿ ನೀಡಲಾಗುತ್ತದೆ.
ತಪಾಸಣೆ ಪ್ಯಾಕೇಜ್ ಪಡೆಯಲು ಮುಂಚಿತ/ಪೂರ್ವ ನೋಂದಣಿ ಕಡ್ಡಾಯವಾಗಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಹಾಗೂ ನೋಂದಣಿಗೆ ದೂ.ಸಂ.: 0824 6613165 , ಅಥವಾ ಇಮೇಲ್: ajhlounge@gmail.com ಅನ್ನು ಸಂಪರ್ಕಿಸುವಂತೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.





